🔥 ಸತ್ಯಮೇವ ಜಯತೆ 🔥
Here we provide daily News, Current Affairs, current affair Quiz, Notes, and Crypto/Financial News.
Channel Created : 𝟏𝟓th August 𝟐𝟎𝟐𝟑
Buy ads: https://telega.io/c/kannadaquiz0
Last updated 2 weeks, 6 days ago
ಸಮುದ್ರದ ಅಲೆ ನನಗೆ ಆದರ್ಶ.
ಎದ್ದು ಎದ್ದು ಬೀಳುತ್ತಿರುವುದಕ್ಕಲ್ಲ.
ಬಿದ್ದರೂ ಏಳುತ್ತಿರುವುದಕ್ಕೆ.
ಬೀಳುವುದನ್ನು ಕಂಡ ನೀವು
ಸ್ವಲ್ವ ಇದ್ದು ಏಳುವುದನ್ನು ಕೂಡ ನೋಡಿ ಹೋಗಿ,
ಚೆನ್ನಾಗಿರುತ್ತದೆ💥💪💥
ಹಿಂದೂಸ್ಥಾನವು ಎಂದೂ ಮರೆಯದ
ಭಾರತ ರತ್ನವು ನೀನಾಗು...💪
ನಿಮ್ಮ ಮನದನಿಯ ಸಾರಥಿ!🤗
@LovingCHALLENGES
Last updated 4 months ago
Spiritual channel in Kannada
Last updated 1 week, 5 days ago
🚩🌺🌄🌺🚩
ಮುಂಜಾನೆಯ ಸೂಳ್ನುಡಿ
ಕೇವಲ ತರ್ಕಕ್ಕೆ ನಿಶ್ಚಯವಿಲ್ಲದ ದೆಸೆಯಿಂದ ತಾರ್ಕಿಕರೂ ಕೂಡ ತತ್ತ್ವ ನಿಶ್ಚಯವನ್ನು ಹೊಂದುವುದಿಲ್ಲ ವೆಂದು ಹೇಳುತ್ತಾರೆ:
ಸ್ವಾನುಭೂತಾವವಿಶ್ವಾಸೇ ತರ್ಕಸ್ಯಾಪ್ಯನವಸ್ಥಿತೇಃ |
ಕಥಂ ವಾ ತಾರ್ಕಿಕಂಮನ್ಯಸ್ತತ್ತ್ವನಿಶ್ಚಯಮಾಪ್ನುಯಾತ್ ||
"ತನ್ನ ಅನುಭವದಲ್ಲಿ ತನಗೇ ವಿಶ್ವಾಸವಿಲ್ಲದಿದ್ದರೆ, ಒಂದು ವಾದವು ಮತ್ತೊಂದು ವಾದದಿಂದ ಕೊನೆಯಿಲ್ಲದೆ ಖಂಡಿಸಲ್ಪಟ್ಟರೆ, ತಾರ್ಕಿಕನು ಒಂದು ವಸ್ತುವಿನ ಸ್ವರೂಪ ನಿಶ್ಚಯವನ್ನು ತರ್ಕದಿಂದ ಹೇಗೆ ತಾನೆ ಪಡೆಯುವನು?
(ಚಿತ್ರದೀಪ ವಿವೇಕ ಪ್ರಕರಣ)
ಮುಂದುವರಿಯುತ್ತದೆ....
*🙏🌺ಶುಭದಿನವಾಗಲಿ🌺🙏*
🚩🔯🌸🌄⚛🌅🌸🔯🚩
🌸🌼ಬೆಳಗಿನ 🌅 ಸೂಳ್ನುಡಿ🌼🌸
ಪ್ರಾವೃಷೇಣ್ಯಸ್ಯ ಮಾಲಿನ್ಯಂ
ದೋಷಃ ಕೋಭೀಷ್ಟವರ್ಷಿಣಃ |
ಶಾರದಾಭ್ರಸ್ಯ ಶುಭ್ರತ್ವಂ
ವದ ಕುತ್ರೋಪಯುಜ್ಯತೇ ।।
(ಚಂದ್ರಕವಿ-ಶಾರ್ಙ್ಗಧರ ಪದ್ಧತಿ)
ಬೇಕಾದಷ್ಟು ಮಳೆಗರೆಯುವ ವರ್ಷಾಕಾಲದ ಮೋಡದ ಕಪ್ಪು ಬಣ್ಣದಲ್ಲಿ ದೋಷವೇನು? ಶರತ್ಕಾಲದ ಮೇಘಗಳ ಶುಭ್ರವರ್ಣದಿಂದ ಉಪಯೋಗವಾದರೂ ಏನು?
ಮನುಷ್ಯನಿಗೆ ರೂಪು ಮುಖ್ಯವಲ್ಲ; ಗುಣ ಮುಖ್ಯ. ಪರರಿಗೆ ಉಪಕಾರಿಯಾಗಿದ್ದರೆ, ಅವನ ರೂಪು ಹೇಗಿದ್ದರೇನು?
*🌷🌺🙏ಶುಭದಿನವಾಗಲಿ!🙏🌺🌷*
"ನಾಲ್ಕನೇ ಶ್ಲೋಕ"
ಕನಕ ಮಹಾಮಣಿ ಭೂಷಿತ ಲಿಂಗಂ
ಫಣಿಪತಿವೇಷ್ಟಿತ ಶೋಭಿತ ಲಿಂಗಂ |
ದಕ್ಷಸುಯಜ್ಞ ವಿನಾಶನ ಲಿಂಗಂ
ತತ್ ಪ್ರಣಮಾಮಿ ಸದಾಶಿವ ಲಿಂಗಂ 4
ಅರ್ಥ: ಯಾರನ್ನು ಬಂಗಾರ ಮತ್ತು ವಜ್ರ , ವೈಢೂರ್ಯಗಳಿಂದ ಕೂಡಿದ ಆಭರಣಗಳಿಂದ ಅಲಂಕರಿಸಲ್ಪಟ್ಟಿದೆಯೋ, ಯಾರ ಬಳಿ ಸರ್ಪವು ಪ್ರಜ್ವಲಿಸುತ್ತಿದೆಯೋ, ಹಾಗೂ ಯಾರು ದಕ್ಷನ ಯಜ್ಞವನ್ನು ನಾಶಮಾಡಿದನೋ ಆ ಚಿರಂತನವಾದ ಲಿಂಗರೂಪಿ ಶಿವನಿಗೆ ನಾನು ಶಿರಸಾ ಬಾಗಿ ನಮಸ್ಕರಿಸುತ್ತೇನೆ.
"ಐದನೇ ಶ್ಲೋಕ"
ಕುಂಕುಮ ಚಂದನ ಲೇಪಿತ ಲಿಂಗಂ
ಪಂಕಜಹಾರ ಸುಶೋಭಿತ ಲಿಂಗಂ |
ಸಂಚಿತಪಾಪ ವಿನಾಶನ ಲಿಂಗಂ
ತತ್ ಪ್ರಣಮಾಮಿ ಸದಾಶಿವ ಲಿಂಗಂ 5
ಅರ್ಥ: ಯಾರನ್ನು ಸುಗಂಧ ಮತ್ತು ಕೇಸರಿಯಿಂದ ಅಲಂಕರಿಸಲ್ಪಟ್ಟಿದೆಯೋ, ಯಾರು ಪದ್ಮ ಪುಷ್ಪಗಳಿಂದ ಕೂಡಿದ ಸುಗಂಧ-ಪರಿಮಳಯುಕ್ತ ಮಾಲೆಯನ್ನು ಧರಿಸಿರುವನೋ, ಯಾರು ಸಂಚಿತ ಕರ್ಮಗಳನ್ನು ಸಂಪೂರ್ಣವಾಗಿ ನಾಶಮಾಡುವನೋ, ಆ ಚಿರಂತನವಾದ ಲಿಂಗರೂಪಿ ಶಿವನಿಗೆ ನಾನು ಶಿರಸಾ ಬಾಗಿ ನಮಸ್ಕರಿಸುತ್ತೇನೆ.
"ಆರನೇ ಶ್ಲೋಕ"
ದೇವಗಣಾರ್ಚಿತ ಸೇವಿತ ಲಿಂಗಂ
ಭಾವೈರ್ಭಕ್ತಿಭಿರೇವ ಚ ಲಿಂಗಂ |
ದಿನಕರ ಕೋಟಿ ಪ್ರಭಾಕರ ಲಿಂಗಂ
ತತ್ ಪ್ರಣಮಾಮಿ ಸದಾಶಿವ ಲಿಂಗಂ 6
ಅರ್ಥ: ಯಾರು ದೇವತೆಗಳಿಂದ, ಶಿವಗಣಗಳಿಂದ ಹಾಗೂ ಉಳಿದೆಲ್ಲರಿಂದ ಸೇವಿಸಲ್ಪಡುವನೋ, ಯಾರು ಭಕ್ತಿ, ಜ್ಞಾನ, ವೈರಾಗ್ಯಗಳಿಗೆ ಮಾರ್ಗದರ್ಶಕನೋ, ಯಾರು ಕೋಟಿ ಸೂರ್ಯರ ಬೆಳಕಿನಂತೆ ಪ್ರಜ್ವಲಿಸುವನೋ, ಆ ಚಿರಂತನವಾದ ಲಿಂಗರೂಪಿ ಶಿವನಿಗೆ ನಾನು ಶಿರಸಾ ಬಾಗಿ ನಮಸ್ಕರಿಸುತ್ತೇನೆ.
"ಏಳನೇ ಶ್ಲೋಕ"
ಅಷ್ಟದಳೋಪರಿವೇಷ್ಟಿತ ಲಿಂಗಂ
ಸರ್ವಸಮುದ್ಭವಕಾರಣ ಲಿಂಗಂ |
ಅಷ್ಟದರಿದ್ರವಿನಾಶನ ಲಿಂಗಂ
ತತ್ ಪ್ರಣಮಾಮಿ ಸದಾಶಿವ ಲಿಂಗಂ 7
ಅರ್ಥ: ಯಾರು ಎಂಟು ದಳ ಪುಷ್ಪಗಳಿಂದ ಸುತ್ತುವರಿದಿರುವನೋ, ಯಾರು ಎಲ್ಲಾ ಭೋಗ ಭಾಗ್ಯಗಳಿಗೆ ಪ್ರಮುಖ ಕಾರಣನೋ, ಯಾರು ತನ್ನ ಭಕ್ತರ ಎಂಟು ವಿಧದ ದಾರಿದ್ರ್ಯವನ್ನು ನಾಶಮಾಡುವನೋ, ಆ ಚಿರಂತನವಾದ ಲಿಂಗರೂಪಿ ಶಿವನಿಗೆ ನಾನು ಶಿರಸಾ ಬಾಗಿ ನಮಸ್ಕರಿಸುತ್ತೇನೆ.
"ಎಂಟನೇ ಶ್ಲೋಕ"
ಸುರಗುರು ಸುರವರ ಪೂಜಿತ ಲಿಂಗಂ
ಸುರವನ ಪುಷ್ಪ ಸದಾರ್ಚಿತ ಲಿಂಗಂ |
ಪರಮಪದಂ ಪರಮಾತ್ಮಕ ಲಿಂಗಂ
ತತ್ ಪ್ರಣಮಾಮಿ ಸದಾಶಿವ ಲಿಂಗಂ 8
ಅರ್ಥ: ಯಾರು ದೇವತೆಗಳ ಗುರುವಿನಿಂದ ಪೂಜಿಸಲ್ಪಡುತ್ತಾರೋ, ಯಾರು ದೇವೋತ್ತಮನಿಂದ ಪೂಜೆಗೊಳ್ಳುತ್ತಾರೋ, ಯಾರನ್ನು ಸದಾ ದೇವಲೋಕದ ಹೂವು ತೋಟದಿಂದ ಆಯ್ದ ಪುಷ್ಪಗಳಿಂದಲೇ ಪೂಜಿಸುತ್ತಾರೋ, ಯಾರು ಪರಮ ಸತ್ಯವೋ, ಆ ಚಿರಂತನವಾದ ಲಿಂಗರೂಪಿ ಶಿವನಿಗೆ ನಾನು ಶಿರಸಾ ಬಾಗಿ ನಮಸ್ಕರಿಸುತ್ತೇನೆ. "ಫಲ ಶ್ರುತಿ" ಲಿಂಗಾಷ್ಟಕಮಿದಂ ಪುಣ್ಯಂ ಯಃ ಪಠೇಶ್ಶಿವಸನ್ನಿಧೌ |
ಶಿವಲೋಕಮವಾಪ್ನೋತಿ ಶಿವೇನ ಸಹ ಮೋದತೇ || ಅರ್ಥ : ಈ ಲಿಂಗಾಷ್ಟಕ ಸ್ತೋತ್ರವನ್ನು ಶಿವನ ಸನ್ನಿಧಿಯಲ್ಲಿ ಪಠಿಸಿದರೆ ಶಿವ ಲೋಕ ಪ್ರಾಪ್ತಿಯಾಗುತ್ತದೆ. ಲಿಂಗಾಷ್ಟಕ ಸ್ತೋತ್ರ ಬ್ರಹ್ಮಮುರಾರಿ ಸುರಾರ್ಚಿತ ಲಿಂಗಂ
ನಿರ್ಮಲಭಾಸಿತ ಶೋಭಿತ ಲಿಂಗಮ್ |
ಜನ್ಮಜ ದುಃಖ ವಿನಾಶಕ ಲಿಂಗಂ
ತತ್-ಪ್ರಣಮಾಮಿ ಸದಾಶಿವ ಲಿಂಗಮ್ 1
ದೇವಮುನಿ ಪ್ರವರಾರ್ಚಿತ ಲಿಂಗಂ
ಕಾಮದಹನ ಕರುಣಾಕರ ಲಿಂಗಮ್ |
ರಾವಣ ದರ್ಪ ವಿನಾಶನ ಲಿಂಗಂ
ತತ್-ಪ್ರಣಮಾಮಿ ಸದಾಶಿವ ಲಿಂಗಮ್ 2
ಸರ್ವ ಸುಗಂಧ ಸುಲೇಪಿತ ಲಿಂಗಂ
ಬುದ್ಧಿ ವಿವರ್ಧನ ಕಾರಣ ಲಿಂಗಮ್ |
ಸಿದ್ಧ ಸುರಾಸುರ ವಂದಿತ ಲಿಂಗಂ
ತತ್-ಪ್ರಣಮಾಮಿ ಸದಾಶಿವ ಲಿಂಗಮ್ 3
ಕನಕ ಮಹಾಮಣಿ ಭೂಷಿತ ಲಿಂಗಂ
ಫಣಿಪತಿ ವೇಷ್ಟಿತ ಶೋಭಿತ ಲಿಂಗಮ್ |
ದಕ್ಷ ಸುಯಜ್ಞ ನಿನಾಶನ ಲಿಂಗಂ
ತತ್-ಪ್ರಣಮಾಮಿ ಸದಾಶಿವ ಲಿಂಗಮ್ 4
ಕುಂಕುಮ ಚಂದನ ಲೇಪಿತ ಲಿಂಗಂ
ಪಂಕಜ ಹಾರ ಸುಶೋಭಿತ ಲಿಂಗಮ್ |
ಸಂಚಿತ ಪಾಪ ವಿನಾಶನ ಲಿಂಗಂ
ತತ್-ಪ್ರಣಮಾಮಿ ಸದಾಶಿವ ಲಿಂಗಮ್ 5
ದೇವಗಣಾರ್ಚಿತ ಸೇವಿತ ಲಿಂಗಂ
ಭಾವೈ-ರ್ಭಕ್ತಿಭಿರೇವ ಚ ಲಿಂಗಮ್ |
ದಿನಕರ ಕೋಟಿ ಪ್ರಭಾಕರ ಲಿಂಗಂ
ತತ್-ಪ್ರಣಮಾಮಿ ಸದಾಶಿವ ಲಿಂಗಮ್ 6
ಅಷ್ಟದಳೋಪರಿವೇಷ್ಟಿತ ಲಿಂಗಂ
ಸರ್ವಸಮುದ್ಭವ ಕಾರಣ ಲಿಂಗಮ್ |
ಅಷ್ಟದರಿದ್ರ ವಿನಾಶನ ಲಿಂಗಂ
ತತ್-ಪ್ರಣಮಾಮಿ ಸದಾಶಿವ ಲಿಂಗಮ್ 7
ಸುರಗುರು ಸುರವರ ಪೂಜಿತ ಲಿಂಗಂ
ಸುರವನ ಪುಷ್ಪ ಸದಾರ್ಚಿತ ಲಿಂಗಮ್ |
ಪರಾತ್ಪರಂ ಪರಮಾತ್ಮಕ ಲಿಂಗಂ
ತತ್-ಪ್ರಣಮಾಮಿ ಸದಾಶಿವ ಲಿಂಗಮ್ 8
ಲಿಂಗಾಷ್ಟಕಮಿದಂ ಪುಣ್ಯಂ ಯಃ ಪಠೇಶ್ಶಿವ ಸನ್ನಿಧೌ |
ಶಿವಲೋಕಮವಾಪ್ನೋತಿ ಶಿವೇನ ಸಹ ಮೋದತೇ ||
' ವ್ಯವಹಾರ ಜ್ಞಾನ..!' ' Comon Sense'
ಇದರ ಅವಶ್ಯಕತೆ ಎಷ್ಟು ಎಂದು ತಿಳಿದು ಬಂತು.
ಶುಭವಾಗಲಿ, ಜೈ ಶ್ರೀ ಸೀತಾರಾಮ್ 🙏🚩
ವ್ಯವಹಾರಿಕ ಜ್ಞಾನ :
ಒಬ್ಬ ಪ್ರಖಂಡ ಪಂಡಿತ ವಿಷ್ಣುದಾಸ ಶಾಸ್ತ್ರಿ ಎಂಬುವರ ಮನೆಯಲ್ಲಿ ಅವರ ಮೊದಲ ಸಂತಾನದ ಜನ್ಮವಾಗುವದಿತ್ತು. ಜ್ಯೋತಿಷ್ಯ ಶಾಸ್ತ್ರದಲ್ಲಿ ಬಹಳ ದೊಡ್ಡ ವಿದ್ವಾನರಾಗಿದ್ದರು. ಅವರು ಮೊದಲೇ ಆಯಾಳನ್ನು ಹೇಳಿದ್ದರು. ಮಗು ಹುಟ್ಟುತ್ತಲೇ ಒಂದು ಲಿಂಬೆಹಣ್ಣನ್ನು ಹೊರಗಡೆ ಉರುಳಿಸಲು. ಸರಿಯಾದ ಸಮಯಕ್ಕೆ ಗಂಡು ಮಗುವಿನ ಜನ್ಮವಾಯಿತು. ಆದರೆ ಮಗು ಅಳಲೇ ಇಲ್ಲ. ಮಗುವಿನ ಅಂಗೈಗಳನ್ನು ತಿಕ್ಕಿ, ಪ್ರಥಮೋಪಚಾರ ಮಾಡಿದಳು. ಸ್ವಲ್ಪ ಹೊತ್ತಲ್ಲಿ ಮಗು ಅಳತೊಡಗಿತು. ಆಮೇಲೆ, ಪಂಡಿತರು ಹೇಳಿದ ಹಾಗೆ ಒಂದು ನಿಂಬೆಹಣ್ಣನ್ನು ಹೊರಗಡೆ ಉರುಳಿಸಿ ಬಿಟ್ಟಳು. ಆನಂತರ ಮಗುವಿನ ಕರಳ ಬಳ್ಳಿಯನ್ನು ಕತ್ತರಿಸಿ ತೆಗೆಯುವ ಪ್ರಕ್ರಿಯೆಯಲ್ಲಿ ತೊಡಗಿದಳು.
ಇತ್ತ ಪಂಡಿತರು ಲಿಂಬಿಹಣ್ಣು ಹೊರಗೆ ಉರಳಿ ಬಂದ ಸಮಯವನ್ನು ಭವಿಷ್ಯದ ಕುಂಡಲಿಯಲ್ಲಿ ಲೆಕ್ಕ ಹಾಕಿ ನೋಡಿದಾಗ ಪಿತೃಹತ ಯೋಗ ಕಾಣಿಸಿತು. ಅಂದರೆ ಪುತ್ರನ ಕೈಯಿಂದ ತಂದೆಯ ಮರಣ ಸಂಭವಿಸುವ ಯೋಗ. ಪಂಡಿತರ ಮನಸ್ಸು ಆತಂಕ ಮತ್ತು ದುಃಖಗಳಿಂದ ಕೂಡಿತು. ತನ್ನ ಪುತ್ರನನ್ನು ಈ ಗಂಡಾಂತರದಿಂದ ಪಾರು ಮಾಡಲು ಅವರು ಮನೆಯನ್ನು ತ್ಯೆಜಿಸಿ ಹೊರಟು ಹೋದರು.
16 ವರ್ಷಗಳು ಕಳೆದವು.
ಪುತ್ರನು ತನ್ನ ತಂದೆಯ ವಿಷಯವಾಗಿ ವಿಚಾರಿಸಿದಾಗ ಅವನಿಗೆ ತನ್ನ ಜನ್ಮದ ವಿಷಯದಲ್ಲಿ ನಡೆದ ಘಟನೆಯನ್ನು ತಿಳಿಸಿದ ಅವಳ ತಾಯಿ ಸುಮ್ಮನಿದ್ದು ಬಿಡುತ್ತಿದ್ದಳು. ಯಾಕೆಂದರೆ ಅದಕ್ಕಿಂತ ಹೆಚ್ಚಿನ ಸಂಗತಿ ಅವಳಿಗೆ ತಿಳಿದಿರಲಿಲ್ಲ. ಹೀಗಿರುವಾಗ ಆ ಪಂಡಿತರ ಮಗನು ಅವರದೇ ಹಾದಿಯಲ್ಲಿ ನಡೆದು ಪ್ರಖಾoಡ ಜ್ಯೋತಿಷ್ಯನಾದನು.
ಒಂದು ಬಿರು ಬಿಸಿಲಿನ ಕಾಲದಲ್ಲಿ ಪ್ರಕೃತಿಯ ಮೇಲೆ ಅದರ ದುಷ್ಪರಿಣಾಮವಾಗಲು ರಾಜನಿಗೆ ದೊಡ್ಡ ಚಿಂತೆಯಾಗಹತ್ತಿತು. ಉತ್ತಮ ಮಳೆ ಬೆಳೆಗಾಗಿ ಆತ ಯೋಚಿಸುತ್ತ ತನ್ನ ರಾಜ್ಯದಲ್ಲಿ ಡಂಗುರ ಸಾರಿಸಿದ. '- ಮಳೆಯ ವಿಷಯದಲ್ಲಿ ಉತ್ತಮ ಭವಿಷ್ಯವನ್ನು ನುಡಿಯುವವರಿಗೆ ಒಳ್ಳೆಯ ಬಹುಮಾನ ಕೊಡಲಾಗುತ್ತದೆ, ಅದೇ ತಪ್ಪು ಮಾಹಿತಿ ಕೊಟ್ಟರೆ ಮೃತ್ಯುದಂಡ ವಿಧಿಸಲಾಗುವುದು ' ಇದನ್ನು ಕೇಳಿದ ಬಾಲಕನು ತನ್ನ ಭವಿಷ್ಯದ ಲೆಕ್ಕಾಚಾರದಲ್ಲಿ ಒಂದು ನಿರ್ಧಾರಕ್ಕೆ ಬಂದು ಅರಮನೆಗೆ ಹೊರಟು ಹೋದ. ಆದರೆ ಆ ರಾಜ ದರಬಾರದಲ್ಲಿ ಆಗಲೇ ಒಬ್ಬ ವಯಸ್ಸಾದ ಹಿರಿಯ ಪಂಡಿತರು ಮಳೆಯ ಕುರಿತು ಭವಿಷ್ಯ ನುಡಿಯಲು ಬಂದು ಕುಳಿತಿದ್ದರು.
" ಮಹಾಪ್ರಭು ಇವತ್ತು ಸಂಜೆ ಸರಿಯಾಗಿ 4:00 ವೇಳೆಗೆ ಮಳೆ ಆಗುತ್ತದೆ." ಆ ವೃದ್ಧ ಜ್ಯೋತಿಷ್ಯ ಹೇಳಿದರು. ಆಮೇಲೆ ಈ ಬಾಲಕ ತನ್ನ ಜ್ಯೋತಿಷ್ಯ ಲೆಕ್ಕದ ಪ್ರಕಾರ ಯೋಚಿಸಿ ಮುಂದೆ ಬಂದು
" ಮಹಾರಾಜರೇ ನಾನು ಕೂಡ ಏನೋ ಹೇಳಲು ಇಚ್ಛಿಸುತ್ತೇನೆ..!" ಎಂದು ಹೇಳಿದ. ರಾಜನು ಅವನಿಗೂ ಕೂಡ ಅನುಮತಿ ಕೊಟ್ಟ.
" - ಮಹಾಪ್ರಭು ಮಳೆ ಇವತ್ತೇ ಆಗುವುದು ಆದರೆ 4:00 ಗಂಟೆಗಲ್ಲ, ನಾಲ್ಕು ಗಂಟೆಯ ಕೆಲವು ಕ್ಷಣಗಳ ಮೇಲೆ ಮಳೆ ಆಗುತ್ತದೆ "
ಈ ಮಾತಿಗೆ ವೃದ್ಧ ಪಂಡಿತರ ಮುಖ ಅವಮಾನದಿಂದ ಕೆಂಪಾಯಿತು. ಅವರು ಹೇಳಿದರು
" - ಮಹಾ ಪ್ರಭು ಮಳೆಯ ಜೊತೆಗೆ ಆನೇಕಲ್ಗಳು ಬೀಳುತ್ತವೆ. ಅವು 50 ಗ್ರಾಂ ನಷ್ಟು ತೂಕವುಳ್ಳವುಗಳಾಗುತ್ತವೆ. "
ಬಾಲಕ ತಾನು ಕೂಡ ಪುನಃ ತನ್ನದೇ ಲೆಕ್ಕಾಚಾರದಲ್ಲಿ ಯೋಚಿಸಿ ಹೇಳಿದ
" ಮಹಾರಾಜರೇ ಅವಶ್ಯವಾಗಿ ಆನೇಕಲ್ಗಳು ಬೀಳುತ್ತವೆ. ಆದರೆ ಅವು 47 ಗ್ರಾಂ ಗಿಂತ ಕಡಿಮೆ ಇರುತ್ತವೆ. "
ವೃದ್ಧರಿಗೆ ಸವಾಲು ಹಾಕಿದಂತೆ ಹೇಳಬಿಟ್ಟ. ಜನಗಳೆಲ್ಲ ಸಂಜೆಯ 4.00 ಗಂಟೆಯ ಹೊತ್ತಿಗಾಗಿ ಕಾಯುತೊಡಗಿದರು. ಮಧ್ಯಾಹ್ನ 3:30 ಹೊತ್ತಿಗೆ ಬಿರುಬಿಸಲಿನ ಆಕಾಶವು ಶುಭ್ರವಾಗಿತ್ತು. ಮೋಡಗಳ ಒಂದು ಕುರುಹು ಇರಲಿಲ್ಲ. ಅದರ 20 ನಿಮಿಷಗಳ ಮೇಲೆ ಆಕಾಶದಲ್ಲೆಲ್ಲ ಮೋಡದ ಕಪ್ಪು ಛಾಯೆ ಹರಡಿಕೊಂಡಿತು. ನಸುಗತ್ತಲು ಮುಸುಕಿ ವಾತಾವರಣದಲ್ಲಿ ತಂಪು ಅನುಭವವಾಗತೊಡಗಿತು. ಸಂಜೆಯ ನಾಲ್ಕು ಗಂಟೆಯಾದರೂ ಮಳೆಯ ಒಂದು ಹನಿ ನೀರು ಕೂಡ ಆಕಾಶದಿಂದ ಬೀಳಲಿಲ್ಲ. 4:00 ಗಂಟೆ 5 ನಿಮಿಷ ಆಗುತ್ತಿದ್ದಂತೆ ಆಕಾಶದಿಂದ ಮುಸಳಿ ಧಾರೆ ವರ್ಷಾ ಆಗತೊಡಗಿತು. ವೃದ್ಧ ಜ್ಯೋತಿಷ್ಯ ಪಂಡಿತರು ತಲೆತಗ್ಗಿಸಿದರು. ಅರ್ಧ ಗಂಟೆಯ ಮಳೆಯ ನಂತರ ಆನೇಕಲ್ಗಳು ಬೀಳತೊಡಗಿದವು. ರಾಜನ ಅವುಗಳನ್ನು ತೂಕ ಮಾಡಿಸಿದಾಗ ಅವು ಸರಿಯಾಗಿ 47 ಗ್ರಾಮೀನಷ್ಟು ತೂಗಿದವು. ಡಂಗುರದ ನಿಬಂಧನೆಯ ಅನುಸಾರ ಸೈನಿಕರು ವೃದ್ಧ ಪಂಡಿತರಿಗೆ ಬಂಧಿಸಿದರು. ರಾಜನು ಆ ಬಾಲಕನಿಗೆ
" - ನಿನಗೆ ಬೇಕಾದ ಬಹುಮಾನವನ್ನು ನೀನು ಕೇಳಿಕೋ " ಎಂದು ಹೇಳಿದನು.
" ಮಹಾರಾಜ, ಇವರನ್ನು ಬಿಟ್ಟುಬಿಡಿ..!" ಎಂದನು. ರಾಜನ ಸೂಚನೆಯ ಮೇಲೆ ವೃದ್ಧ ಜ್ಯೋತಿಷಿಯನ್ನು ಬಿಡುಗಡೆಗೊಳಿಸಲಾಯಿತು.
" ಜನ ಸಂಪತ್ತು ಕೇಳೋ ಬದಲು ನೀನು ಇವರ ಬಿಡುಗಡೆ ಕುರಿತು ಯಾಕೆ ಕೇಳಿದೆ..!? "
ಬಾಲಕನು ಕತ್ತು ತಗ್ಗಿಸಿದ, ಕೆಲವು ಕ್ಷಣಗಳ ಮೇಲೆ ಕತ್ತನ್ನು ಮೇಲೆಕ್ಕೆತ್ತಿದಾಗ ಅವನ ಕಣ್ಣುಗಳು ಕಂಬನಿಯಿಂದ ತುಂಬಿಕೊಂಡಿದ್ದವು.
"- ಯಾಕೆಂದರೆ ಇವರು 16 ವರ್ಷದ ಹಿಂದೆ ನನ್ನನ್ನು ಬಿಟ್ಟು ಹೋದ ನನ್ನ ತಂದೆ ವಿಷ್ಣುದತ್ತ ಶಾಸ್ತ್ರಿಗಳಾಗಿದ್ದಾರೆ "
ವೃದ್ಧ ಜ್ಯೋತಿಷಿಗಳು ಆಶ್ಚರ್ಯ ಚಕಿತಗೊಂಡರು. ಇಬ್ಬರು ಅರಮನೆಯಿಂದ ಹೊರಗೆ ಬಂದರು. ಕೊನೆಯಲ್ಲಿ ತಂದೆಯ ಕಣ್ಣುಗಳಿಂದ ಪಿತೃ ವಾತ್ಸಲ್ಯವು ಕಂಬನಿಯಾಗಿ ಜಾರಿತು. ಬಿಕ್ಕಿ ಬಿಕ್ಕಿ ಅಳುತ್ತಾ ಬಾಲಕನನ್ನು ತಬ್ಬಿಕೊಂಡು
" - ನಿನಗೆ ಹೇಗೆ ಗೊತ್ತಾಯ್ತು ನಾನೇ ನಿನ್ನ ತಂದೆ ವಿಷ್ಣುದತ್ತ ಇದ್ದೇನೆ ಎಂದು..!? "
" ಹೇಗೆಂದರೆ ಇವತ್ತು ಕೂಡ ನೀವು ಭವಿಷ್ಯದ ಲೆಕ್ಕಾಚಾರವನ್ನು ಸರಿಯಾಗಿಯೇ ಮಾಡುತ್ತೀರಿ. ಸಾಮಾಜಿಕ ಜ್ಞಾನದ ಉಪಯೋಗ ಮಾಡುವುದಿಲ್ಲ. "
ಬಾಲಕನು ಕೂಡ ಕಂಬನಿ ಮಿಡಿಯುವ ಮಧ್ಯೆ ಹೇಳಿದ.
" ಅಂದರೆ..!? "
ಆ ತಂದೆಯು ಮತ್ತಷ್ಟು ಅಚ್ಚರಿಗೊಂಡ.
" ಆ ಆಯಾಳು ಮಗುವಿನ ಜನ್ಮ ಆಗುತ್ತಲೇ ನಿಂಬೆ ಹಣ್ಣನ್ನು ಹೊರಗಡೆ ಹೇಗೆ ಉರಳಿಸುತ್ತಾಳೆ..? ಸ್ವಲ್ಪ ಸಮಯ ಮಗುವಿಗೆ ಸಂಭಾಳಿಸಲು ಹೋಗುತ್ತದೆ. ಆ ಸಮಯದಲ್ಲಿ ಗ್ರಹ ಸಂಯೋಗವು ಬದಲಾಗಬಹುದಲ್ಲವೇ..!?, ಪಿತೃಹತ ಯೋಗವಿದ್ದರೆ, ಸ್ವಲ್ಪ ಸಮಯ ಕಳೆದ ಮೇಲೆ ಪಿತೃ ರಕ್ಷಕ ಯೋಗವೂ ಆಗಬಹುದು..!!" ಪುತ್ರನ ಮಾತಿನಿಂದ ಪಂಡಿತರಿಗೆ ಎರಡೇ ಶಬ್ದಗಳ ಅಭಾವದಿಂದ ತಾನು ಕಳೆದ ಕಷ್ಟದ ದಿನಗಳ ಶೃಂಖಲೆಯು ಕಣ್ಮುಂದೆ ಸುಳಿದಾಡಿತು. ಇದಕ್ಕೆ ಬೇಕಾಗಬಹುದಾದ -
ಈ ಗೊಧಾದೇವಿ ಯಾದರೂ ಯಾರು.
ತಮಿಳುನಾಡಿನ ಶ್ರೀವಲ್ಲಿ ಪುತ್ತೂರು ನಲ್ಲಿ ವಿಷ್ಣು ಚಿತ್ತರ್ ಎಂಬುವವರು ಮಹಾನ್ ಭಕ್ತರು 12 ಆಳ್ವಾರಗಳಲ್ಲಿ ಅವರಿಗೆ ಪೆರಿಯಾಳ್ ವಾರ್ ಎಂದು ಕೂಡ ಹೆಸರು. ಮಹಾನ್ ಭಕ್ತ ಶಿರೋಮಣಿ. ಸಾಕ್ಷಾತ್ ಭಗವಂತನೇ ಅವರಿಗೆ ದರ್ಶನ್ ನೀಡಿ ತಮ್ಮ ಬಳಿಯೇ ಅವರಿಗೆ ಕೈoಕರ್ಯ ಮಾಡಲು ಅವಕಾಶ ಮಾಡಿಕೊಟ್ಟಿರುತ್ತಾರೆ.
ಪ್ರತಿದಿನ ಭಗವಂತನಿಗೆ ತಾವು ಬೆಳೆದ ಹೂವುಗಳನ್ನು ತುಳಸಿಗಳನ್ನು,ಸಂಗ್ರಹಿಸಿ ಮಾಲೆಯನ್ನಾಗಿ ಪೋಣಿಸಿ ಭಗವಂತನಿಗೆ ಸಮರ್ಪಿಸುವ ನಿತ್ಯ ಕೈoಕರ್ಯ ಅವರದಾಗಿರುತ್ತದೆ. ಅವರ ತುಳಸಿವನದಲ್ಲಿ ಸಾಕ್ಷಾತ್ ಭಗವತಿ ಲಕ್ಷ್ಮಿ ದೇವಿಯು ಅಯೋನಿಜೆಯಾಗಿ ಅವತಾರವೆತ್ತುತ್ತಾಳೆ..
ಪೆರಿಯಾಳವಾರರು ಆ ಮಗುವನ್ನು ತಮ್ಮ ಸ್ವಂತ ಮಗಳಂತೆ ಸಾಕಿ ಬೆಳಸಿ ಸಂಸ್ಕಾರಯುತವಾಗಿ ಬೆಳೆಸುತ್ತಾರೆ.ಗೋಧೆಯಾದರೂ ಚಿಕ್ಕಂದಿನಲ್ಲಿಯೇ ಕೃಷ್ಣನ ಭಕ್ತಿ ಪ್ರೇಮಿ, ತನ್ನ ಉಸಿರೇ ಶ್ರೀ ಕೃಷ್ಣನು ಈ ಜೀವವಿರುವುದೇ ಕೃಷ್ಣನಿಗಾಗಿ ಎಂಬಂತೆ ಪ್ರತಿಕ್ಷಣವೂ ಕೃಷ್ಣನ ನಾಮಸ್ಮರಣೆಯಲ್ಲಿಯೇ ಇರುತ್ತಾಳೆ.
ಅವನ ಸ್ಮರಣೆ ಇಲ್ಲದಿದ್ದರೆ ಈ ದೇಹವು ಬೇಡ ಎನ್ನುವಷ್ಟು ಭಕ್ತಿ ಅವಳಲ್ಲಿ..
ಪ್ರತಿದಿನ ತಂದೆಯು ಭಗವಂತನಗಾಗಿ ಕೊಂಡೊಯ್ಯುತ್ತಿದ್ದಂತಹ ಹೂವಿನ ಮಾಲೆಗಳನ್ನೆಲ್ಲ ಈಕೆ ಮೊದಲೇ ಧರಿಸಿ ಆನಂತರ ಭಗವಂತನಿಗೆ ಸಮರ್ಪಿಸುತ್ತಾ ಇರುತ್ತಾಳೆ. ಕೃಷ್ಣನೇ ತನ್ನ ಪತಿ ಎಂದು ಕೂಡ ಅವಳ ಭಾವ ಸಮರ್ಪಣೆ.
ಅಂತಹ ಗೋದಾದೇವಿಯು ಭಗವಂತನ ಸಾನಿಧ್ಯವನ್ನು ಪಡೆಯಲು ಈ ವ್ರತವನ್ನು ಆಚರಿಸುತ್ತಾಳೆ. ತಾನೇ ಗೋಪಿಕೆಯಂತೆ, ಸಖಿಯ ರೇಲ್ಲರೂ ಗೋಪಿಕಾ ಸ್ತ್ರೀಯಂತೆ, ಶ್ರೀ ವಲ್ಲಿ ಪುತ್ತೂರು ಆಕೆಗೆ ಗೋಕುಲದಂತೆ,, ಕೃಷ್ಣನ ಜನ್ಮವನ್ನು ಕೃಷ್ಣನ ಲೀಲೆಗಳನ್ನು ಸಾಕ್ಷಾತ್ ಗೋಕುಲದಲ್ಲಿ ಇರುವಂತೆಯೇ ಭಾವಿಸಿ ಈ ವ್ರತವನ್ನು,ಕೇವಲ ತನಗಾಗಿ ಮಾತ್ರ ಆಕೆ ಈ ವ್ರತವನ್ನು ಆಚರಿಸಲಿಲ್ಲ, ಸಾಮಾಜಿಕವಾಗಿಯೂ ಕೂಡ ಎಲ್ಲರ ಒಳಿತಿಗಾಗಿಯೂದೇಶವು ಸಂಪತ್ಭರಿತವಾಗಲಿ, ರೈತರು ಹೆಚ್ಚು ಬೆಳೆಯನ್ನು ಬೆಳೆಯಲಿ,ಎಲ್ಲರ ಮನಸ್ಸಿನಲ್ಲಿಯೂ ಆಧ್ಯಾತ್ಮಿಕತೆಯು ಎಂದುಪ್ರತಿಯೊಬ್ಬರ ರನ್ನು ಭಕ್ತಿಯಲ್ಲಿ ಎಳೆದೊಯ್ಯುವಲ್ಲಿ ಗೋಧಾದೇವಿಯ ಪಾತ್ರ ಮಹತ್ವದ್ದು. ಈ ಧನುರ್ಮಾಸದಲ್ಲಿ ಪ್ರತಿದಿನ ಬೆಳಗಿನ ಜಾವದಲ್ಲಿಯೇ ತನ್ನೆಲ್ಲ ಸಖಿಯರನ್ನೆಲ್ಲ ಕರೆದು ಭಗವಂತನ ದರ್ಶನಕ್ಕಾಗಿ ಎಲ್ಲರನ್ನೂ ಕರೆದೊಯ್ಯುವ ಪ್ರಕ್ರಿಯೆ,, ಒಂದೊಂದು ದಿನಕ್ಕೂ ಒಂದು ಭಗವಂತನಮೇಲೆ ಪಾಶುರ.. ಅಂದರೆ ಪದ್ಯ,,, ಭಗವಂತನ ವರ್ಣನೆಗಳು,, ನಾವು ಹೇಗೆಲ್ಲಾ ಇರಬೇಕು,ಏನೆಲ್ಲಾ ಮಾಡಬೇಕು, ಹೇಗಿದ್ದರೆ ಮೋಕ್ಷ ಎಂಬುದನ್ನೆಲ್ಲ ತನ್ನ ತಿರುಪ್ಪಾವೈ ನಲ್ಲಿ ಹಾಡಿ ಹೊಗಳಿದ್ದಾಳೆ.
ಹೇಗೆ ಗೋಕುಲದಲ್ಲಿ ಗೋಪಿಯರೆಲ್ಲರೂ ಸಾಕ್ಷಾತ್ ಕೃಷ್ಣನಂತಹ ಪತಿಯೇ ತಮಗೆ ಸಿಗಲಿ ಎಂದು ಹೇಗೆ ಕಾತ್ಯಾಯಿನಿ ವ್ರತವನ್ನು ಆಚರಿಸಿದರೋ,, ಹಾಗೇ ಇಲ್ಲೂ ಗೊಧಾ ದೇವಿಯೂ ಈ ವ್ರತವನ್ನು ಆಚರಿಸುತ್ತಾಳೆ.
ಗೋಕುಲದಲ್ಲಿ ಕಾತ್ಯಾಯಿನಿ ಪಾರ್ವತಿ ದೇವಿಯನ್ನು ಗೋಪಿಕಾ ಸ್ತ್ರೀಯರೆಲ್ಲರೂ ಸೇರಿ ತಮಗೂ ಕೃಷ್ಣನಂತಹ ವರನೇ ಸಿಗಲಿ ಎಂದು ಪ್ರಾರ್ಥಿಸುತ್ತಾರೆ. ಹೇಗೆ???
ಹೇಮಂತಋತು.. ಬಹಳ ಚಳಿ,ಯಮುನಾ ನದಿಯಲ್ಲಿ ಸೂರ್ಯೋದಯಕ್ಕೂ ಮುಂಚೆ ಸ್ನಾನ ಮಾಡಿ,ವ್ರತ ಅನುಷ್ಠಾನವನ್ನುಮಾಡಲು ತೊಡಗುತ್ತಾರೆ. ಯಮುನಾ ನದಿಯ ದಡದಲ್ಲಿರುವಂತಹ ಮರಳಿನಲ್ಲಿ,ತಮ್ಮ ಮನಸ್ಸಿನಲ್ಲಿ ಸ್ಥಾಪಿಸಿಕೊಂಡಂತಹ ಪಾರ್ವತಿ ಕಾತ್ಯಾಯಿನಿ ಮೂರ್ತಿಯನ್ನು ಆ ಮರಳಿನಿಂದ ಮಾಡಿ,, "ಕಾತ್ಯಾಯಿನಿ ಮಹಾಮಾಯೇ ಮಹಾಯೋಗಿನ್ಯಾಧೀಶ್ವರಿ ನಂದಗೋಪ ಸುತಂ ದೇವಿ ಪತಿo ಮೇ ಕುರುತೆ ನಮ: ಎಂದು ಮಂತ್ರವನ್ನು ಜಪಿಸಿ,ಆ ದೇವಿಗೆ ಗಂದ ಪುಷ್ಪ ಪತ್ರಗಳು ಎಲ್ಲದ ರಿಂದ ಅರ್ಜಿಸಿ. ಭಗೆ ಭಗೆಯ ನೈವೇದ್ಯವನ್ನು ಮಾಡಿ ತಮ್ಮ ವ್ರತವನ್ನು ಹೇಗೆ 30 ದಿನಗಳ ಕಾಲ ಮುಗಿಸಿಕೊಳ್ಳುತ್ತಾರೆಯೋ.. ಅದೇ ರೀತಿ ಈ ಶ್ರೀವಲ್ಲಿ ಪುತ್ತೂರಿನಲ್ಲಿಯೂ ಕೂಡ ಗೋದಾದೇವಿಯು ಈ ಧನುರ್ಮಾಸದ ವ್ರತವನ್ನು ಆಚರಿಸುತ್ತಾಳೆ.
ಇಂದಿಗೂ ಕೂಡ ಕಾತ್ಯಾಯಿನಿ ವ್ರತವನ್ನು ಯಾರು ಮದುವೆಯಾಗದವರು ಮಾಡುತ್ತಾರೆಯೋ ಅವರಿಗೆ ನಿಶ್ಚಯವಾಗಿ ಮದುವೆಯಾಗುತ್ತದೆ ಎಂಬುದು ಕೂಡ ನಿಜ..
ಮುತ್ತೈದೆಯರು ಸೌಮಂಗಲ್ಯ ಪ್ರಾಪ್ತಿಗಾಗಿಯೂ. ಕನ್ಯೆಯರು ಉತ್ತಮ ಪತಿ ಸಿಗಲಿ ಎಂಬ ಕಾರಣಕ್ಕಾಗಿಯೂ ಈ ವ್ರತವನ್ನುಮಾಡಬಹುದು.
ಎಲ್ಲರೂ ತಮ್ಮ ತಮ್ಮ ಅರಿಷ್ಟ ನಿವಾರಣೆಗಾಗಿ ತಮಗೆ ಇಷ್ಟಾರ್ಥ ನೆರವೇರಲು ಈ ಧನುರ್ಮಾಸದ ಪೂಜೆಯನ್ನು ಮಾಡಬೇಕು..
ದೇವರಿಗೆ ಈ ವ್ರತದ ಕೊನೆಯ ಪರಿಸಮಾಪ್ತಿಯಲ್ಲಿ ಸುಮಂಗಲಿಯರು ವ್ರತವನ್ನು ಆಚರಿಸಿದರೆ ಕೊನೆಯ ದಿನ ಸುಮಂಗಲಿಯರಿಗೆ ತಾಂಬೂಲದ ಜೊತೆ ಸಕ್ಕರೆ ಪೊಂಗಲ್, ಹುಗ್ಗಿ, ಅಥವಾ ಕಾರ ಪೊಂಗಲ್ ದಕ್ಷಿಣೆ ನೀಡಿ ವ್ರತ ಸಮಾಪ್ತಿಯನ್ನು ಮಾಡಬೇಕು.
ಈ ಧನುರ್ಮಾಸದಲ್ಲಿ ಎಂತಹ ಆಹಾರವನ್ನು ಸೇವಿಸಬೇಕು ಎಂಬುವುದು ಕೂಡ ಬಹಳ ವಿಶೇಷವೇ.
ಚಳಿಗಾಲ ಶರೀರಕ್ಕೆ ಕೊಬ್ಬಿನ ಅಂಶ ಬೇಕು. ಆಹಾರ ಹೆಚ್ಚು ಶಾಖ ನೀಡುವಂತಿರಬೇಕು,ಕೊಬ್ಬಿನ ಅಂಶವಿರುವಂತಹ ತುಪ್ಪ, ಕೊಬ್ಬರಿ,ತೆಂಗು,ಹೆಚ್ಚು ಬಳಸಬೇಕು, ಕಫ ನಿವಾರಣೆಗಾಗಿ ಕಟು ಅಂದರೆ ಮೆಣಸು ಜೀರಿಗೆ ಹೆಚ್ಚು ಉಪಯೋಗಿಸಬೇಕು.. ಈ ತಿಂಗಳಿನಲ್ಲಿ ನಮಗೆ ಹೆಚ್ಚು ಪ್ರೋಟೀನ್ ಅವಶ್ಯಕತೆ ಇರುವುದು,,ಅದಕ್ಕೆ ಹೆಸರುಬೇಳೆ ಹೆಚ್ಚಾಗಿ ಉಪಯೋಗಿಸಬೇಕು ಎಂಬುದು ಕೂಡ ಅದಕ್ಕಾಗಿ ಹೆಚ್ಚು ಪೊಂಗಲ್ ಮಾಡುವುದು ಇದೇ ತಿಂಗಳಿನಲ್ಲಿ..
ಮೂರು ಭಾಗ ಅಕ್ಕಿ ಒಂದು ಭಾಗ ಹೆಸರು ಬೇಳೆ, ಕೊಬ್ಬರಿ ಶುಂಠಿ ಅರಿಶಿನ ಗೋಡಂಬಿ, ತುಪ್ಪ ಇದೆಲ್ಲವನ್ನು ಹಾಕಿ ಮಾಡಿದಂತಹ ಈ ಪೊಂಗಲ್ ನಾವು ಬೆಳಗ್ಗೆಯೇ ಸೇವಿಸುವುದು ಕೂಡ ಆರೋಗ್ಯದ ದೃಷ್ಟಿಯಿಂದಲೇ.. ಈ ಸೀಸನ್ ನಲ್ಲಿ ಸಿಗುವಂತಹ ಅವರೆಕಾಳು ಶುಂಠಿ ತೆಂಗು ಇಂಗು ಹೆಚ್ಚಾಗಿ ಬಳಸಬೇಕು..
ಪ್ರಪಂಚದ ಯಾವಮೂಲೆಯಲ್ಲಿವಿಷ್ಣುದೇವಾಲಯಗಳಿದ್ದರೂ ಅಲ್ಲಿ ಕೂಡ ಈ ಧನುರ್ಮಾಸದಲ್ಲಿಬೆಳಗಿನಜಾವದ ಪೂಜೆಗಳು ನಡೆಯುತ್ತಿರುವುದು ಮತ್ತು ಇಂದಿಗೂ ಗೋದೆ ಹಾಡಿದಂತಹ ತಿರುಪ್ಪಾವೈ ಯನ್ನು ಪಠಿಸುವುದು ನಾವು ಕಾಣಬಹುದು.. ತಿರುಪ್ಪಾವೈ ಕೇವಲ ತಮಿಳುನಾಡಿಗೆ ಸೀಮಿತವಾಗಿರದೆ, ನಮ್ಮ ಸಂಸ್ಕೃತಿ ಆಚರಣೆ ಧಾರ್ಮಿಕ ಪದ್ಧತಿಗಳನ್ನು ಎತ್ತಿಹಿಡಿಯುವಲ್ಲಿ ಸಹಕಾರಿಯಾಗಿದೆ ಎಂದರೆ ಸುಳ್ಳಲ್ಲ.
ಆoಡಾಳ್ ತಿರುವಡಿಗಳೇ ಶರಣಂ 🙇♀️.🙏🙏🙏✍️ಯಶುಪ್ರಸಾದ್ — at Vijaya Gardens,Baridih,Jamshedpur.
🚩🔯🌸🌄⚛🌅🌸🔯🚩
🌸🌼ಬೆಳಗಿನ 🌅 ಸೂಳ್ನುಡಿ🌼🌸
ಗುಣವಜ್ಜನ ಸಂಸರ್ಗಾತ್
ಯಾತಿ ಸ್ವಲ್ಪೋಽಪಿ ಗೌರವಮ್ |
ಪುಷ್ಪಾಮಾಲಾನುಷಂಗೇಣ
ಸೂತ್ರಂ ಕಂಠೇ ಚ ಧಾರ್ಯತೇ ||
_"ಗುಣಶಾಲಿ ಜನರ (ಸಜ್ಜನರ) ಸಹವಾಸದಿಂದ ಸಣ್ಣವನೂ ಗೌರವವನ್ನು ಪಡೆಯುತ್ತಾನೆ. ಹೂವಿನ ಹಾರದ ಸಂಬಂಧದಿಂದ ದಾರವನ್ನು ಕತ್ತಿನಲ್ಲಿ ಧರಿಸುತ್ತಾರೆ."_
ಕೇವಲ ನಾರನ್ನಾಗಲಿ, ದಾರವನ್ನಾಗಲಿ ಜನರು ಕತ್ತಿನಲ್ಲಿ ಧರಿಸುವುದಿಲ್ಲ. ಹೂವಿನ ಹಾರ ಮಾಡಲು ನಾರನ್ನಾಗಲಿ, ದಾರವನ್ನಾಗಲಿ ಉಪಯೋಗಿಸಲೇ ಬೇಕು. ಹೀಗೆ ಹೂವಿನ ಹಾರದಲ್ಲಿ ಹೂವಿನ ಸಂಗಡ ದಾರ/ನಾರು ಇರುವುದರಿಂದ ಆ ದಾರ/ನಾರು ಅನಾಯಾಸವಾಗಿ, ಸಹಜವಾಗಿ ನಮ್ಮ ಕಂಠವನ್ನು ಏರುತ್ತದೆ. ಆ ಹಾರವನ್ನು ದೇವರಿಗೆ ಏರಿಸಿದರೆ ಆ ದಾರ/ನಾರೂ ಸಹ ದೇವರ ಮುಡಿಯನ್ನು ಏರುತ್ತದೆ.
ಇದೇ ರೀತಿ ನಾವು ಸಜ್ಜನರ ಜೊತೆಯಲ್ಲಿ ಅವರ ಸಹವಾಸದಲ್ಲಿ ಇದ್ದಾಗ ಅವರಿಗೆ ಸಿಗುವ ಗೌರವ - ಮರ್ಯಾದೆಗಳ ಜೊತೆಗೇ ನಮಗೂ ಸ್ವಲ್ಪ ಮಟ್ಟಿಗಾದರೂ ಗೌರವ - ಮರ್ಯಾದೆಗಳು ಸಿಗುತ್ತವೆ. ಆದ್ದರಿಂದ ನಾವು ಸದಾ ಸಜ್ಜನರ ಸಹವಾಸದಲ್ಲಿಯೇ ಇರುವುದು ಒಳಿತು. ಅದರಿಂದ ನಮಗೆ ಇಬ್ಬಗೆಯ ಪ್ರಯೋಜನವಿದೆ. ಒಂದು: ಅವರಿಗೆ ಸಿಗುವ ಮನ್ನಣೆ ಗೌರವಗಳ ಜೊತೆಗೆ ನಮಗೂ ತಕ್ಕ ಮಟ್ಟಿಗೆ ಗೌರವ ಸಿಗುತ್ತದೆ.
ಎರಡು: ಅವರಲ್ಲಿರುವ ಒಳ್ಳೆಯ ಗುಣಗಳ ಪ್ರಭಾವ ನಮ್ಮ ಮೇಲೂ ಆಗಿ ನಮ್ಮಲ್ಲಿಯೂ ಆ ಒಳ್ಳೆಯ ಗುಣಗಳು ಬಂದು ನೆಲೆಸಬಹುದು.
ಹಾಗಾದಾಗ ನಾವೂ ಸಹ ಅವರಂತೆ ಒಳ್ಳೆಯವರಾಗಬಹುದು. ಇದು ಆಗಲೇಬೇಕು. ಆಗ ಮಾತ್ರ "ಸಜ್ಜನರ ಸಹವಾಸ ಹೆಜ್ಜೇನು ಸವಿದಂತೆ" ಎಂಬ ಮಾತು ಸಾರ್ಥಕವಾಗುತ್ತದೆ. ಇದೇ ನಮ್ಮ ಗುರಿಯಾಗಬೇಕು. ಇದಕ್ಕಾಗಿಯೇ ನಾವು ದೊಡ್ಡವರ ಸಹವಾಸ ಮಾಡಬೇಕು. ಅವರ ಸಹವಾಸದಿಂದ ನಮ್ಮ ಅಂತರಂಗ ಹಾಗೂ ಬಹಿರಂಗ ಶುದ್ಧಿಯಾಗುತ್ತದೆ. ನಮ್ಮ ವ್ಯಕ್ತಿತ್ವಕ್ಕೆ ಮೆರುಗು ನೀಡುವ ಗುಣಗಳು ಗುಣಶಾಲಿಗಳ, ಸಜ್ಜನರ ಒಡನಾಟದಲ್ಲಿರುತ್ತವೆ.
ನಮ್ಮ ಜೀವನದಲ್ಲಿಯೂ ಇಂತಹ ಅನೇಕ ಘಟನೆಗಳು ನಡೆಯುತ್ತವೆ. ಒಂದು ಉದಾಹರಣೆ ನೋಡೋಣ.
ನಾವು ಎಂದಾದರೂ ದೊಡ್ಡ ವ್ಯಕ್ತಿಯ ಸಂಗಡ ಹೋಗುತ್ತಿದ್ದೇವೆ ಎಂದು ತಿಳಿಯೋಣ. ದಾರಿಯಲ್ಲಿ ಹೋಗುವಾಗ ಪರಿಚಿತ ಜನರು ಆ ವ್ಯಕ್ತಿಗೆ ಕೈ ಮುಗಿದು ನಮಸ್ಕರಿಸಿ ಗೌರವ ಸೂಚಿಸುತ್ತಾರೆ. ಅವರ ಸಂಗಡ ಇದ್ದುದರಿಂದ ನಮ್ಮನ್ನೂ ಗುರುತಿಸಿ ನಮಗೂ ಗೌರವ ಕೊಡುತ್ತಾರೆ. ಮುಂದೆ ಎಂದಾದರೂ ಆ ಜನರಿಗೆ ನಾವು ಒಬ್ಬರೇ ಇದ್ದಾಗ ಕಂಡರೂ ಪುನಃ ಅವರು ನಮಗೆ ಗುರುತಿಸಿ ಮಾತಾಡಿಸಿ ಗೌರವ ಕೊಡಬಹುದು. ಹೀಗೆ ನಾವು ಆ ದೊಡ್ಡ ವ್ಯಕ್ತಿಯ ಸಂಗಡ ಇದ್ದ ಕಾರಣ ಜನರು ನಮಗೂ ಗೌರವ ಕೊಡುವಂತಾಯಿತು. ಇದೇ "ಹೂವಿನಿಂದ ನಾರು ಸ್ವರ್ಗಕ್ಕೆ" ಎಂಬ ಮಾತಿನ ಭಾವಾರ್ಥ.
ಇಂತಹ ಸಜ್ಜನರ ಸಹವಾಸ ಹೆಚ್ಚೆಚ್ಚು ಮಾಡೋಣ. ಅವರ ಒಳ್ಳೆಯ ಗುಣಗಳನ್ನು ಸಂಪಾದಿಸೋಣ.
*🌷🌺🙏ಶುಭದಿನವಾಗಲಿ!🙏🌺🌷*
🚩🌺🌄🌺🚩
ಮುಂಜಾನೆಯ ಸೂಳ್ನುಡಿ
ಅಸ್ತಿ ಬ್ರಹ್ಮೇತಿ ಚೇದ್ವೇದ ಪರೋಕ್ಷಜ್ಞಾನಮೇವ ತತ್ |
ಅಹಂ ಬ್ರಹ್ಮೇತಿ ಚೇದ್ವೇದ ಸಾಕ್ಷಾತ್ಕಾರಃ ಸ ಉಚ್ಯತೇ ||
"ಬ್ರಹ್ಮವು ಇದೆ" 1 ಎಂದು ತಿಳಿದುಕೊಂಡರೆ ಅದು ಪರೋಕ್ಷ ಜ್ಞಾನವಾಗುವುದು. ನಾನೇ ಬ್ರಹ್ಮವಾಗಿದ್ದೇನೇ 2 ಎಂದು ತಿಳಿದುಕೊಂಡರೆ ಅದು ಅಪರೋಕ್ಷ ಜ್ಞಾನವಾಗುವುದು -ಎಂದು ಹೇಳಲ್ಪಟ್ಟಿದೆ.
[1, ಬ್ರಹ್ಮವು ಇದೆ -ಎಂದು ತಿಳಿದುಕೊಂಡರೆ ಅದರಿಂದ ಇವನನ್ನು ಸತ್ ಎಂದು ತಿಳಿಯುವರು.
2, ನಾನು ಬ್ರಹ್ಮವಾಗಿರುವೆನು -ಎಂದು ಅದು ತನ್ನನ್ನೇ ಅರಿತುಕೊಂಡಿತು.]
(ಚಿತ್ರದೀಪ ವಿವೇಕ ಪ್ರಕರಣ)
ಮುಂದುವರಿಯುತ್ತದೆ...
*🙏🌺ಶುಭದಿನವಾಗಲಿ🌺🙏*
*💫🛕ಓಂ ಶ್ರೀ ಗಾಯಿತ್ರಿ ವಿಶ್ವಕರ್ಮ ಪರಬ್ರಹ್ಮಣಿ ನಮಃ 🛕💫
⚜️ ವಾಸ್ತು ವಿಚಾರ*⚜️
💫, ವಾಸ್ತು ಶಾಸ್ತ್ರದ ಪ್ರಕಾರ ಹೊರಗಡೆಯಿಂದ ಬಂದವರು ಮನೆಯೊಳಗೆ ಶೂ ಅಥವಾ ಚಪ್ಪಲಿ ಧರಿಸಿಕೊಂಡು ಮನೆಯ ಒಳಗೆ ಬರಬಾರದು, ಹಿಂದೂ ಧರ್ಮದ ಆಚರಣೆಯ ಪ್ರಕಾರವಾಗಿ ಇದನ್ನು ವಿರೋಧಿಸಲಾಗಿದೆ ಶನಿದೇವನಿಗೂ ನಮ್ಮ ಪಾದಗಳಿಗೂ ಸಂಬಂಧವಿದೆ ಎಂದು ಹೇಳಲಾಗುತ್ತದೆ ನಮ್ಮಪಾದಗಳಿಗೆ ಧರಿಸುವ ಶೂಗಳು ಮತ್ತು ಚಪ್ಪಲಿಗಳು ರಾಹು -ಕೇತು- ಗ್ರಹದ ಸಂಕೇತವಾಗಿರುತ್ತದೆ ಆದ್ದರಿಂದ ಪಾದರಕ್ಷೆ ಮತ್ತು ಚಪ್ಪಲಿ ಧರಿಸಿ ಮನೆಯೊಳಗೆ ಬರುವ ವ್ಯಕ್ತಿಗಳೊಂದಿಗೆ ದುಷ್ಟ ಗ್ರಹಗಳು ಸಹ ಮನೆಯೊಳಗೆ ಪ್ರವೇಶಿಸುತ್ತದೆ ಅದಕ್ಕಾಗಿ ಮನೆಯಲ್ಲಿ ಚಪ್ಪಲಿ ಧರಿಸಿ ಓಡಾಡಬಾರದು ಈ ರೀತಿ ಮಾಡಿದರೆ ಮನೆ ಒಳಗೆ ಋಣಾತ್ಮಕ ಶಕ್ತಿ ಹೆಚ್ಚಾಗುತ್ತದೆ ಎಂದು ಹೇಳಲಾಗಿದೆ, 🙏💐
🚩 ಭಗವಂತ ಶ್ರೀ ಪರಶುರಾಮ🚩
ಇಂತಿ ಜ್ಯೋತಿಷ್ಯ ಸೇವೆಯಲ್ಲಿ ತಮ್ಮವ ಪ್ರಾಚೀನಶಾಸ್ತ್ರಾಸಕ್ತ
🌸
L ವಿವೇಕಾನಂದ ಆಚಾರ್ಯ🇮🇳 (Army Rtd) Gubbi.
🌸ph no :9480916387
*💫🛕ಓಂ ಶ್ರೀ ಗಾಯಿತ್ರಿ ವಿಶ್ವಕರ್ಮ ಪರಬ್ರಹ್ಮಣಿ ನಮಃ 🛕💫
⚜️ ವಾಸ್ತು ವಿಚಾರ*⚜️
🏚️, ವಾಸ್ತು ಶಾಸ್ತ್ರದ ಪ್ರಕಾರ ಆಗ್ನೇಯ ದಿಕ್ಕಿನಲ್ಲಿಅಡುಗೆ ಮನೆ ಇರುವುದು ಶುಭಕರವೆಂದು ಪರಿಗಣಿಸಲಾಗಿದೆ, ಆಗ್ನೇಯ ಕೋನದ ದಿಕ್ಕಿನ ಆಡಳಿತ ಗ್ರಹ ಶುಕ್ರ:,- ಶುಕ್ರ: ಗ್ರಹವು ಸಂತೋಷ ಮತ್ತು ಸಮೃದ್ಧಿಯನ್ನು ನೀಡುವ ಗ್ರಹವಾಗಿರುವುದರಿಂದ ಅಡುಗೆ ಮನೆ ಆಗ್ನೇಯದಲ್ಲಿ ಇಲ್ಲದಿದ್ದರೆ ಅದು ಪೂರ್ವದಲ್ಲಿ ಕೆಲಸ ಮಾಡುತ್ತದೆ ಉಳಿದ ದಿಕ್ಕುಗಳಿಂದವಾಸ್ತುದೋಷಗಳು, ಸೃಷ್ಟಿಯಾಗುತ್ತದೆ ಪಶ್ಚಿಮ ಮತ್ತು ನೈರುತ್ಯದಲ್ಲಿ ಅಡುಗೆ ಮಾಡಬಾರದು ಉತ್ತರ ಅಥವಾ ಈಶಾನ್ಯ ಮೂಲೆಯಲ್ಲಿ ನಿರ್ಮಿಸಲಾದ, ಅಡುಗೆ ಮನೆಯಲ್ಲಿ ಮಾಡಿದ ಅಡುಗೆಯು ಗಂಭೀರ ಕಾಯಿಲೆಗಳನ್ನು ತರುತ್ತವೆ ವಾಸ್ತು ಶಾಸ್ತ್ರದ ಪ್ರಕಾರ ಮನೆಯ ನೈರುತ್ಯ ದಿಕ್ಕಿನಲ್ಲಿಯೂ ಸಹ ಅಡುಗೆಯನ್ನು ಮಾಡಬಾರದು ಎಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ,🙏💐
🚩 ಭಗವಂತ ಶ್ರೀ ಪರಶುರಾಮ🚩
ಇಂತಿ ಜ್ಯೋತಿಷ್ಯ ಸೇವೆಯಲ್ಲಿ ತಮ್ಮವ ಪ್ರಾಚೀನಶಾಸ್ತ್ರಾಸಕ್ತ
🌸
L ವಿವೇಕಾನಂದ ಆಚಾರ್ಯ🇮🇳 (Army Rtd) Gubbi.
🌸ph no :9480916387
🔥 ಸತ್ಯಮೇವ ಜಯತೆ 🔥
Here we provide daily News, Current Affairs, current affair Quiz, Notes, and Crypto/Financial News.
Channel Created : 𝟏𝟓th August 𝟐𝟎𝟐𝟑
Buy ads: https://telega.io/c/kannadaquiz0
Last updated 2 weeks, 6 days ago
ಸಮುದ್ರದ ಅಲೆ ನನಗೆ ಆದರ್ಶ.
ಎದ್ದು ಎದ್ದು ಬೀಳುತ್ತಿರುವುದಕ್ಕಲ್ಲ.
ಬಿದ್ದರೂ ಏಳುತ್ತಿರುವುದಕ್ಕೆ.
ಬೀಳುವುದನ್ನು ಕಂಡ ನೀವು
ಸ್ವಲ್ವ ಇದ್ದು ಏಳುವುದನ್ನು ಕೂಡ ನೋಡಿ ಹೋಗಿ,
ಚೆನ್ನಾಗಿರುತ್ತದೆ💥💪💥
ಹಿಂದೂಸ್ಥಾನವು ಎಂದೂ ಮರೆಯದ
ಭಾರತ ರತ್ನವು ನೀನಾಗು...💪
ನಿಮ್ಮ ಮನದನಿಯ ಸಾರಥಿ!🤗
@LovingCHALLENGES
Last updated 4 months ago
Spiritual channel in Kannada
Last updated 1 week, 5 days ago