Why Pay for Entertainment? Access Thousands of Free Downloads Now!

ಆಧ್ಯಾತ್ಮಿಕ ಪ್ರಪಂಚ

Description
Spiritual channel in Kannada
Advertising
We recommend to visit

ಸಮುದ್ರದ ಅಲೆ ನನಗೆ ಆದರ್ಶ.
ಎದ್ದು ಎದ್ದು ಬೀಳುತ್ತಿರುವುದಕ್ಕಲ್ಲ.
ಬಿದ್ದರೂ ಏಳುತ್ತಿರುವುದಕ್ಕೆ.
ಬೀಳುವುದನ್ನು ಕಂಡ ನೀವು
ಸ್ವಲ್ವ ಇದ್ದು ಏಳುವುದನ್ನು ಕೂಡ ನೋಡಿ ಹೋಗಿ,
ಚೆನ್ನಾಗಿರುತ್ತದೆ💥💪💥

ಹಿಂದೂಸ್ಥಾನವು ಎಂದೂ ಮರೆಯದ
ಭಾರತ ರತ್ನವು ನೀನಾಗು...💪

ನಿಮ್ಮ ಮನದನಿಯ ಸಾರಥಿ!🤗
@LovingCHALLENGES

Last updated 1 week ago

🔥 ಸತ್ಯಮೇವ ಜಯತೆ 🔥

Channel Created : 𝟏𝟓th August 𝟐𝟎𝟐𝟑
"ᏢᏟ ಯಿಂದ ᎠᏟ" ವರೆಗಿನ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಪೂರ್ಣ ಉಚಿತ ಮಾರ್ಗದರ್ಶನ ಒಂದೇ ವೇದಿಕೆಯಲ್ಲಿ!!
👉🏻 ಪ್ರತಿನಿತ್ಯ ಕ್ವಿಜ್ ᴜᴘʟᴏᴀᴅ ಮಾಡಲಾಗುತ್ತದೆ.

Buy Ads Here: https://telega.io/c/kannadaquiz0

Last updated 1 day, 10 hours ago

ೀ 𝐒𝐓𝐀𝐑𝐓𝐄𝐂𝐇 𝐎𝐅𝐅𝐈𝐂𝐈𝐀𝐋 𝐁𝐎𝐓
@OfficialSTA_bot

ೀ 𝐋𝐔𝐌𝐈𝐍𝐎𝐕𝐀 𝐎𝐒𝐈𝐒
@LuminovaOsis
@LuminovaOsisbot

ೀ 𝐏𝐀𝐑𝐓𝐍𝐄𝐑𝐒𝐇𝐈𝐏 𝐒𝐓𝐀𝐑𝐓𝐄𝐂𝐇 𝐀𝐂𝐀𝐃𝐄𝐌𝐘
@STApartner
@STApartner_bot

"𝘤𝘳𝘦𝘢𝘵𝘪𝘷𝘪𝘵𝘺 𝘵𝘩𝘢𝘵 𝘪𝘴 𝘤𝘳𝘦𝘢𝘵𝘦

Last updated 4 days, 22 hours ago

1 month, 2 weeks ago

#ಫಾಲ್ಗುಣಪೂರ್ಣಿಮಾ

🌺 ಪೂರ್ಣಿಮಾ ಅಥವಾ ಹುಣ್ಣಿಮೆಯು ಹಿಂದೂಗಳಲ್ಲಿ ತನ್ನದೇ ಆದ ಧಾರ್ಮಿಕ ಮತ್ತು ಆಧ್ಯಾತ್ಮಿಕ ಮಹತ್ವವನ್ನು ಹೊಂದಿದೆ. ಎಲ್ಲಾ ಪೂಜಾ ವಿಧಿವಿಧಾನಗಳು ಮತ್ತು ಇತರ ಧಾರ್ಮಿಕ ಚಟುವಟಿಕೆಗಳನ್ನು ನಿರ್ವಹಿಸಲು ಈ ದಿನವನ್ನು ಮಂಗಳಕರ ದಿನವೆಂದು ಪರಿಗಣಿಸಲಾಗಿದೆ. ಈ
ದಿನದಂದು ಭಕ್ತರು ವಿಷ್ಣುವನ್ನು ಪೂಜಿಸುತ್ತಾರೆ ಮತ್ತು ಭಗವಂತನ ಆಶೀರ್ವಾದವನ್ನು ಪಡೆಯುತ್ತಾರೆ. ಜನರು ಈ ದಿನ ಸತ್ಯನಾರಾಯಣ ವ್ರತವನ್ನೂ ಮಾಡುತ್ತಾರೆ. ಈ ವರ್ಷ ಫಾಲ್ಗುಣ ಮಾಸದ ಹುಣ್ಣಿಮೆಯು ಅತ್ಯಂತ ವಿಶೇಷ ಹುಣ್ಣಿಮೆ ದಿನವಾಗಿದೆ. ಯಾಕೆಂದರೆ ಒಂದೇ ದಿನ ಹುಣ್ಣಿಮೆ, ಹೋಳಿ ಹಬ್ಬ ಮತ್ತು ಗ್ರಹಣವೂ ಒಂದಿದೆ. 2024 ರ ಫಾಲ್ಗುಣ ಪೂರ್ಣಿಮಾ ಯಾವಾಗ.? ಈ ದಿನಪೂಜೆ ಹೇಗೆ ಮಾಡಬೇಕು ಎಂಬುದರ ಸಂಪೂರ್ಣ ಮಾಹಿತಿ ಹೀಗಿದೆ..

🌺 ಫಾಲ್ಗುಣ ಪೂರ್ಣಿಮಾ 2024 ದಿನಾಂಕ ಮತ್ತು
ಸಮಯ :

🌺 ಪೂರ್ಣಿಮಾ ತಿಥಿ ಆರಂಭ: 2024 ರ ಮಾರ್ಚ್
24 ರಂದು ಬೆಳಗ್ಗೆ 09:54 ರಿಂದ
🌺 ಪೂರ್ಣಿಮಾ ತಿಥಿ ಮುಕ್ತಾಯ: 2024 ರ ಮಾರ್ಚ್ 25 ರಂದು ಮಧ್ಯಾಹ್ನ 2:29 ರವರೆಗೆ.
🌺 2024 ರ ಮಾರ್ಚ್ 24, 2024 ರಂದು
ಪೂರ್ಣಿಮಾ ತಿಥಿಯು ಬೆಳಗ್ಗೆ 09:54 ರಿಂದ ಪ್ರಾರಂಭವಾಗುತ್ತದೆ ಮತ್ತು ಇದು ಮಾರ್ಚ್ 25 ರಂದು ಮಧ್ಯಾಹ್ನ 2:29 ಕ್ಕೆ ಮುಕ್ತಾಯಗೊಳ್ಳುವುದರಿಂದ ಉದಯ ತಿಥಿಯ ಪ್ರಕಾರ, ಮಾರ್ಚ್ 25 ರಂದು ಫಾಲ್ಗುಣಪೂರ್ಣಿಮಾ ವ್ರತವನ್ನು ಆಚರಿಸಲಾಗುತ್ತದೆ.

🌺 ಫಾಲ್ಗುಣ ಪೂರ್ಣಿಮಾ ಮಹತ್ವ :

ಫಾಲ್ಗುಣ ಪೂರ್ಣಿಮಾ ಹಿಂದೂಗಳಲ್ಲಿ ದೊಡ್ಡ ಧಾರ್ಮಿಕ ಮಹತ್ವವನ್ನು ಹೊಂದಿದ ದಿನವಾಗಿದೆ. ಈ ದಿನವನ್ನು ಭಗವಾನ್ ವಿಷ್ಣುವಿನ ಮತ್ತು ಲಕ್ಷ್ಮಿ ದೇವಿಯ ಆರಾಧನೆಗೆ ಮೀಸಲಿಡಲಾಗಿದೆ. ಹುಣ್ಣಿಮೆಯ ದಿನದಂದು ಭಕ್ತರು ಉಪವಾಸವನ್ನು ಆಚರಿಸುತ್ತಾರೆ ಮತ್ತು ಅವರು ಸಮೃದ್ಧಿ
ಮತ್ತು ಅದೃಷ್ಟಕ್ಕಾಗಿ ಭಗವಾನ್ ವಿಷ್ಣು ಮತ್ತು ಚಂದ್ರ ದೇವರಿಗೆ ಪ್ರಾರ್ಥನೆ ಸಲ್ಲಿಸುತ್ತಾರೆ. ಈ ಮಂಗಳಕರ ದಿನದಂದು, ಜನರು ಸತ್ಯನಾರಾಯಣ ವ್ರತವನ್ನು ಆಚರಿಸುತ್ತಾರೆ ಮತ್ತು ಅವರು ವಿಷ್ಣು ಮತ್ತು ಲಕ್ಷ್ಮಿ ದೇವಿಗೆ ಸಂಬಂಧಿಸಿದ ದೇವಾಲಯಗಳಿಗೆ ಸಹ ಭೇಟಿ ನೀಡುತ್ತಾರೆ. ಫಾಲ್ಗುಣ ಪೂರ್ಣಿಮಾ ದಿನದಂದು ಗಂಗಾ ನದಿಯಲ್ಲಿ ಪವಿತ್ರ ಸ್ನಾನ ಮಾಡುವುದು ಪುಣ್ಯ ಕಾರ್ಯವಾಗಿದೆ. ಈ ದಿನದಂದು ಬ್ರಾಹ್ಮಣರಿಗೆ ದಾನ ನೀಡುವುದು ಮತ್ತು ದಾನ ಮಾಡುವುದು ಲಾಭದಾಯಕವೆಂದು ಪರಿಗಣಿಸಲಾಗಿದೆ. ಎಲ್ಲಾ ಧಾರ್ಮಿಕ ಮತ್ತು ಆಧ್ಯಾತ್ಮಿಕ ಚಟುವಟಿಕೆಗಳನ್ನು ನಿರ್ವಹಿಸಲು ಈ ದಿನವನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ.

🌺 ಫಾಲ್ಗುಣ ಪೂರ್ಣಿಮಾ ಪೂಜೆ ವಿಧಾನ :

🌺 ಬೆಳಗ್ಗೆ ಬೇಗ ಎದ್ದು ಪವಿತ್ರ ನದಿ ಸ್ನಾನ ಮಾಡಿ
🌺 ಅನೇಕ ಭಕ್ತರು ಪವಿತ್ರ ಸ್ನಾನ ಮಾಡಲು ಗಂಗಾ ನದಿಯಂತಹ ಪವಿತ್ರ ಸ್ಥಳಗಳಿಗೆ ಭೇಟಿ ನೀಡುತ್ತಾರೆ.
🌺 ಈ ಮಂಗಳಕರ ದಿನದಂದು, ಜನರು ಭಗವಾನ್ ಸತ್ಯನಾರಾಯಣನಿಗೆ ಸಮರ್ಪಿತವಾದ
ಕಟ್ಟುನಿಟ್ಟಾದ ಉಪವಾಸವನ್ನು ಆಚರಿಸುತ್ತಾರೆ.
🌺 ದಾನ ನೀಡುವುದನ್ನು ಸಹ ಲಾಭದಾಯಕವೆಂದು ಪರಿಗಣಿಸಲಾಗುತ್ತದೆ.
🌺 ಹುಣ್ಣಿಮೆಯ ದಿನ ಧಾರ್ಮಿಕ ಚಟುವಟಿಕೆಗಳನ್ನು ಮಾಡಲು ಮಂಗಳಕರ ದಿನವಾಗಿದೆ.
🌺 ಅನೇಕ ಭಕ್ತರು ಈ ದಿನವನ್ನು ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಮಂಗಳಕರವೆಂದು ಹೇಳುತ್ತಾರೆ.
🌺 ಈ ದಿನ ಭಗವಾನ್ ವಿಷ್ಣುವಿಗೆ ಮತ್ತು ಚಂದ್ರನಿಗೆ ಖೀರ್‌ನ್ನು ಅರ್ಪಿಸಲಾಗುತ್ತದೆ.
🌺 ಸಂಜೆ, ಚಂದ್ರ ದೇವರಿಗೆ ಅರ್ಥ್ಯವನ್ನು ಅರ್ಪಿಸಬೇಕು ಮತ್ತು ಚಂದ್ರ ದೇವನಿಂದ ಆಶೀರ್ವಾದವನ್ನು ಪಡೆಯಬೇಕು.

🌺 ಫಾಲ್ಗುಣ ಪೂರ್ಣಿಮಾ ಮಂತ್ರ :

🌺 ಓಂ ಚಂದ್ರಾಯೇ ನಮಃ
🌺 ಓಂ ನಮೋಭಗವತೇ ವಾಸುದೇವಾಯೇ
🌺 ಹರೇ ರಾಮ ಹರೇ ರಾಮ
ರಾಮ ರಾಮ ಹರೇ ಹರೇ
ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ.

🌺 ಫಾಲ್ಗುಣ ಪೂರ್ಣಿಮಾ ಲಕ್ಷ್ಮಿ ಮಂತ್ರ :

🌺 ಓಂ ಹ್ರೀಂ ಶ್ರೀಂ ಲಕ್ಷ್ಮಿಭ್ಯೋ ನಮಃ
🌺 ಓಂ ಶ್ರೀಂ ಹ್ರೀಂ ಶ್ರೀಂ ಶ್ರೀಂ ಕಮಲೇ ಕಮಲಾಯೇ ಪ್ರಸೀದ್ ಪ್ರಸೀದ್
🌺 ಓಂ ಶ್ರೀಂ ಹ್ರೀಂ ಶ್ರೀಂ ಮಹಾಲಕ್ಷ್ಮಿಯೈನಮಃ
🌺 ಓಂ ಶ್ರೀ ಮಹಾಲಕ್ಷ್ಮಿಯೈ ಚ ವಿದ್ಮಹೇ ವಿಷ್ಣು ಪತ್ನೈಯ ಚ ಧೀಮಹಿ ತನ್ನೋ ಲಕ್ಷ್ಮಿ ಪ್ರಚೋದಯಾತ್

🙏💐_ಎಲ್ಲರಿಗೂ ಶುಭವಾಗಲಿ_💐🙏

🙏🌷_ಕೃಷ್ಣಾರ್ಪಣಾಮಸ್ತು _🌷🙏

1 month, 2 weeks ago

🚩🔯🌸🌄🌅🌸🔯🚩
🌸🌼ಬೆಳಗಿನ 🌅 ಸೂಳ್ನುಡಿ🌼🌸

ಪರತೋಷಯಿತಾ ನ ಕಶ್ಚನ
ಸ್ವಗತೋ ಯಸ್ಯ ಗುಣೋಽಸ್ತಿ ದೇಹಿನಃ |
ಪರದೋಷಕಥಾಭಿರಲ್ಪಕಃ
ಸ್ವಜನಂ ತೋಷಯಿತುಂ ಕಿಲೇಚ್ಛತಿ ||
(ಶಿಶುಪಾಲವಧ)

ಯಾವ ಮನುಷ್ಯನಲ್ಲಿ ಇನ್ನೊಬ್ಬರನ್ನು ಸಂತೋಷಗೊಳಿಸಲು ತನ್ನ ಗುಣಗಳಿಲ್ಲವೋ ಆ ಅಲ್ಪನು ಬೇರೆಯವರನ್ನು ನಿಂದಿಸುವ ವಾಕ್ಯಗಳಿಂದ ಇತರರನ್ನು ಸಂತೋಷಗೊಳಿಸಲು ಇಷ್ಟಪಡುತ್ತಾನೆ.

*🌷🌺🙏 ಶುಭದಿನವಾಗಲಿ! 🙏🌺🌷*

1 month, 2 weeks ago

🚩🌺🌅🌺🚩
ಮುಂಜಾನೆಯ ಸೂಳ್ನುಡಿ
ಮಾಸಾಬ್ಧಯುಗಕಲ್ಪೇಷು ಗತಾಗಮ್ಯೇಷ್ವನೇಕಧಾ |
ನೋದೇತಿ ನಾಸ್ತಮೇತ್ಯೇಕಾ ಸಂವಿದೇಶ ಸ್ವಯಂಪ್ರಭಾ ||

"ಮಾಸಗಳು ವರ್ಷಗಳು ಯುಗಗಳು ಕಲ್ಪಗಳು ಭೂತಭವಿಷ್ಯಗಳು - ಇವುಗಳಲ್ಲಿ ಜ್ಞಾನವು ಅಭೇದವಾಗಿ ಹರಿಯುತ್ತದೆ.1 ಈ ಏಕಾಕಾರವಾದ ಜ್ಞಾನಕ್ಕೆ( ಸೂರ್ಯನಂತೆ) ಉದಯಾಸ್ತಗಳಿಲ್ಲ. ಯಾವಾಗಲೂ ತನಗೆ ತಾನೇ ಪ್ರಕಾಶಿಸುತ್ತಿರುತ್ತದೆ.
[1, ಒಂದು ದಿನದ ಅವಸ್ಥಾತ್ರಯದಲ್ಲಿ ಜ್ಞಾನವು ಏಕಾಕಾರದಲ್ಲಿರುವಂತೆ ಮಾಸದಿಂದ ಹಿಡಿದು ಕಲ್ಪಗಳವರೆಗೂ ಅದು ಏಕಾಕಾರವಾಗಿಯೇ ಪ್ರವಹಿಸುತ್ತಿರುತ್ತದೆ. ನಮಗೆ ವೇದ್ಯವಾಗುವ ವಸ್ತುಗಳು ನಾಶವಾಗುತ್ತಿದ್ದರೂ ಅವುಗಳ ಆಧಾರವಾದ ಮತ್ತು ತನಗೆ ತಾನೇ ವಿಷಯವಾದ ಜ್ಞಾನವು ಎಂದಿಗೂ ನಾಶವಾಗುವುದಿಲ್ಲ.]
(ತತ್ತ್ವ ವಿವೇಕ ಪ್ರಕರಣ)
ಮುಂದುವರಿಯುತ್ತದೆ....
*🙏🌺ಶುಭದಿನವಾಗಲಿ🌺🙏*

3 months, 2 weeks ago

ಕೆಂಪು ಇರುವೆಗಳು ರಾಹುವಿನ ಕಾರಕವಾಗಿದ್ದು ಇದು ಆರ್ಥಿಕ ನಷ್ಟ ತರಬಲ್ಲ ಸಂಕೇತವು ಅಥವಾ ಸೂಚನೆ ಆಗಿರುತ್ತದೆ.
ಕೆಂಪು ಇರುವೆ ಮೇಲೆ ರಾಹುವಿನ ಅಧಿಪತ್ಯವಿದೆ ವಿನಾಕಾರಣ ಕೆಂಪು ಇರುವೆ ವಿಪರೀತ ಎಲ್ಲಂದರಲ್ಲಿ ಕಾಣಸಿಗುತ್ತಿದ್ದರೆ ಆರ್ಥಿಕ ಸಂಕಷ್ಟ ಎದುರಾಗುವ ಹಾಗೂ ಧನನಷ್ಟವಾಗುವ ಸಾಧ್ಯತೆ ನಿಚ್ಚಳವಾಗಿರುತದೆ. ಇಂತಹ ಸಂದರ್ಭದಲ್ಲಿ ಅವುಗಳನ್ನು ತೊಂದರೆ ಮಾಡದೆ ಬೇರೆ ಸ್ಥಳಗಳಲ್ಲಿ ಹೋಗುವಂತೆ ಮಾಡಬೇಕು ಕರ್ಪೂರವನ್ನು ಪುಡಿ ಮಾಡಿ ಅವುಗಳಿರುವಂತಹ ಸ್ಥಳದಲ್ಲಿ ಹಾಕಿ ಹಾಗೂ ಲವಂಗವನ್ನು ಪುಡಿ ಮಾಡಿ ಹಾಕಿ ಕರ್ಪೂರ ಘಾಟು, ಲವಂಗ ಖಾರ,ಸ್ವಲ್ಪನೀರಿಗೆ ಉಪ್ಪನ್ನು ಮಿಶ್ರಣ ಮಾಡಿ ಚೆನ್ನಾಗಿ ಕಲಕಿ ಇರುವೆಗಳು ಕೆಂಪಿದ್ದರೆ ಮಾತ್ರವೇ ಹಾಕಿ ಅದು ಹೊರಟು ಹೋಗುತ್ತದೆ.
ಇನ್ನುಳಿದಂತೆ ಕಪ್ಪು ಇರುವೆಗಳ ಬಗ್ಗೆ ಕುತೂಹಲ, ಜಿಜ್ಞಾಸೆ ಸಹಜವಾಗಿರುತ್ತದೆ ಅದು ಬಂದರೆ ಒಳ್ಳೆಯದು ಅಥವಾ ಕೆಟ್ಟದು ಎಂಬ ವಿಚಾರವಾಗಿ ಕಪ್ಪು ಇರುವೆಗಳು ಮೊಟ್ಟೆ ಇಡಿದುಕೊಂಡು ಹೊರ ಹೋಗುತ್ತಿದ್ದರೆ ಶುಭ ಸಂಕೇತ
ಅಕ್ಕಿಯ ಪಾತ್ರೇಯಿಂದ ಅಥವಾ ಡಬ್ಬದಿಂದ ಕಪ್ಪು ಇರುವೆಗಳು ಒಡಾಡುತ್ತಿದ್ದರೆ ಶುಭದಾಯಕವು ಆಗಿದೆ🙏🏻🦜

#astrology

3 months, 2 weeks ago

🚩🔯🌸🌄🌅🌸🔯🚩
🌸🌼ಬೆಳಗಿನ 🌅 ಸೂಳ್ನುಡಿ🌼🌸

ನಯನಾಭ್ಯಾಂ ಪ್ರಸುಪ್ತೋಽಪಿ
ಜಾಗರ್ತಿ ನಯಚಕ್ಷುಷಾ |
ವ್ಯಕ್ತಕ್ರೋಧಪ್ರಸಾದಶ್ಚ
ಸ ರಾಜಾ ಪೂಜ್ಯತೇ ಜನೈಃ ||
(ವಾಲ್ಮೀಕಿ ರಾಮಾಯಣ)

ಕಣ್ಣುಗಳನ್ನು ಮುಚ್ಚಿದ್ದರೂ ಯಾವನು ರಾಜನೀತಿಯೆಂಬ ಕಣ್ಣನ್ನು ತೆರೆದು ಸದಾ ಎಚ್ಚರದಲ್ಲಿರುವನೋ, ಯಾವನ ಕ್ರೋಧವಾಗಲಿ ಪ್ರಸಾದವಾಗಲಿ ಸ್ಪುಟವಾದ ಫಲವನ್ನು ಕೊಡುತ್ತದೆಯೋ, ಅಂಥ ರಾಜನನ್ನು ಪ್ರಜೆಗಳು ಆದರಿಸುತ್ತಾರೆ.

*🌷🌺🙏ಶುಭದಿನವಾಗಲಿ!🙏🌺🌷*

3 months, 2 weeks ago

🚩🌺🌅🌺🚩
ಮುಂಜಾನೆಯ ಸೂಳ್ನುಡಿ
ಮಾತಾ ರಾಮಚಂದ್ರೋ ಮತ್ಪಿತಾ ರಾಮಚಂದ್ರಃ ಸ್ವಾಮಿ ರಾಮೋ ಮತ್ಸಖಾ ರಾಮಚಂದ್ರಃ |
ಸರ್ವಸ್ವಂ ಮೇ ರಾಮಚಂದ್ರೋ ದಯಾಲುರ್ ನಾನ್ಯಂ ನ ಜಾನೇ ನೈವ ಜಾನೇ ನ ಜಾನೇ ||

"ನನ್ನ ತಾಯಿ, ತಂದೆ, ಸ್ನೇಹಿತ, ನನ್ನ ಸ್ವಾಮಿ ಮತ್ತು ಸರ್ವಸ್ವವೂ ಶ್ರೀರಾಮಚಂದ್ರನೇ ಆಗಿದ್ದಾನೆ. ನನಗೆ ರಾಮನ ಹೊರತಾಗಿ ದಯಾಳುವಾಗಿ ಬೇರೋಬ್ಬನನ್ನು ನಾ ಕಾಣೆ ನಾ ಕಾಣೆ.
*🙏🌺ಶುಭದಿನವಾಗಲಿ🌺🙏*

3 months, 3 weeks ago

ನಕ್ಷತ್ರಗಳ ಗಣ ಕೂಟ

ಪ್ರತೀ ನಕ್ಷತ್ರವನ್ನು ದೇವ-ಮನುಷ್ಯ-ರಾಕ್ಷಸ ಗಣ ಎಂಬ ಮೂರು ಗಣ ಕೂಟಗಳ ವಿಭಾಗಗಳಾಗಿ ವಿಂಗಡಿಸಲಾಗಿದೆ.
ಇದನ್ನು ತಿಳಿದುಕೊಳ್ಳುವುದರಿಂದ ಉಪಯೋಗ ಏನೆಂದರೆ...

ಮದುವೆ; ವ್ಯವಹಾರ; ಗೆಳೆತನ ಅಥವಾ ಇನ್ನಿತರ ಯಾವುದೇ ರೀತಿಯಲ್ಲಿ ಇತರರೊಂದಿಗೆ ಸಂವಹನಕ್ಕೆ ನಮ್ಮ ನಮ್ಮ ಗಣಕ್ಕೆ ಸರಿ ಹೊಂದುವವರನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ...!
ಉದಾಹರಣೆಗೆ....

ದೇವಗಣ+ದೇವ ಗಣ = ಆಗಿ ಬರುತ್ತದೆ.

ದೇವ ಗಣ + ರಾಕ್ಷಸ ಗಣ =ಆಗಿ ಬರೋದಿಲ್ಲ.

ರಾಕ್ಷಸ ಗಣ + ರಾಕ್ಷಸ ಗಣ = ಆಗಿ ಬರುತ್ತದೆ

ಮನುಷ್ಯ ಗಣ+ದೇವ ಗಣ = ಆಗಿ ಬರುತ್ತದೆ.

ಮನುಷ್ಯ ಗಣ+ರಾಕ್ಷಸ ಗಣ = ಆಗಿ ಬರೋದಿಲ್ಲ
.....ಈ ರೀತಿ ನೋಡಿಕೊಳ್ಳಿ...

೨೭ ನಕ್ಷತ್ರಗಳು ಈ ಮೂರು ಗಣಕೂಟಗಳಲ್ಲಿ ಹಂಚಿ ಹೋಗಿದೆ ಯಾವ ನಕ್ಷತ್ರ ಯಾವ ಗಣಕೂಟಕ್ಕೆ ಸೇರುವುದು ಎಂದು ನೋಡೋಣ....

೧ - ದೇವಗಣ:-:

ಅಶ್ವಿನಿ, ಮೃಗಶಿರಾ, ಆರ್ದ್ರ, ಪುಷ್ಯ, ಪುನರ್ವಸು, ಹಸ್ತಾ, ಸ್ವಾತಿ, ಅನುರಾಧ, ಶ್ರವಣ, ರೇವತಿ.

೨ - ಮನುಷ್ಯಗಣ:-

ಭರಣಿ, ರೋಹಿಣಿ, ಪೂರ್ವ ಫಾಲ್ಗುಣಿ, ಉತ್ತರ ಪಾಲ್ಗುಣಿ, ಪೂರ್ವಾಷಾಢ, ಉತ್ತರಾಷಾಢ, ಪೂರ್ವಾಭಾದ್ರ, ಉತ್ತರಾಭಾದ್ರ.

೩ - ರಾಕ್ಷಸಗಣ

ಕೃತಿಕಾ, ಅಶ್ಲೇಷ, ಮಾಘ, ಚಿತ್ರಾ, ವಿಶಾಖ, ಜ್ಯೇಷ್ಠ, ಮೂಲ, ಧನಿಷ್ಠ, ಶತಭಿಷ.
🙏
ಸನಾತನ ಸಂಸ್ಕ್ರತಿಯಲ್ಲಿ ಪ್ರತಿಯೊಂದು ಆಧ್ಯಾತ್ಮಿಕ ವಿಚಾರ ಅಮೂಲ್ಯವಾದದ್ದು ಸ್ನೇಹಿತರೇ....ನಮ್ಮ ಸನಾತನ ಸಂಸ್ಕೃತಿ ಮರೆಯಬೇಡಿ🙏
!! ಶ್ರೀಕೃಷ್ಣಾರ್ಪಣಮಸ್ತು !!

#astrology

3 months, 3 weeks ago

🚩🔯🌸🌄🌅🌸🔯🚩
🌸🌼ಬೆಳಗಿನ 🌅 ಸೂಳ್ನುಡಿ🌼🌸

ನ ಕಾಲಃ ಕಾಲಮತ್ಯೇತಿ
ನ ಕಾಲಃ ಪರಿಹೀಯತೇ |
ಸ್ವಭಾವಂ ಚ ಸಮಾಸಾದ್ಯ
ನ ಕಶ್ಚಿದತಿವರ್ತತೇ ||
(ರಾಮಾಯಣ)

ಕಾಲವು ತನ್ನ ವ್ಯವಸ್ಥೆಯನ್ನು ಎಂದಿಗೂ ಉಲ್ಲಂಘಿಸುವುದಿಲ್ಲ. ಕಾಲಕ್ಕೆ ಹಾನಿಯೆಂಬುದಿಲ್ಲ. ಯಾವನೂ ತನ್ನ ಪ್ರಾರಬ್ಧಕರ್ಮವನ್ನು ಮೀರಿಹೋಗಲಾರನು.

*🌷🌺🙏 ಶುಭದಿನವಾಗಲಿ! 🙏🌺🌷*

3 months, 3 weeks ago

🚩🌺🌅🌺🚩
ಮುಂಜಾನೆಯ ಸೂಳ್ನುಡಿ
ಕೃಶಾಯ ಕೃತವಿದ್ಯಾಯ ವೃತ್ತಿಕ್ಷೀಣಾಯ ಸೀದತೇ |
ಅಪಹನ್ಯಾತ್ ಕ್ಷುಧಾಂ ಯಸ್ತು ನ ತೇನ ಪುರುಷಃ ಸಮಃ ||

"ಊಟವಿಲ್ಲದೆ ದುರ್ಬಲವಾಗಿರುವವನಿಗೆ, ವಿದ್ಯಾಭ್ಯಾಸವನ್ನು ಮುಗಿಸಿದವನಿಗೆ ಹಾಗೂ ಆದಾಯವಿಲ್ಲದವನಿಗೆ ಇರುವಂಥ ಹಸಿವನ್ನು ನಿವಾರಿಸುವ ವ್ಯಕ್ತಿಗಿಂತಲೂ ಶ್ರೇಷ್ಠನಾದವನು ಯಾರೂ ಇಲ್ಲ.
(ಅನ್ನದ ಮಹತ್ವ)
*🙏🌺ಶುಭದಿನವಾಗಲಿ🌺🙏*

4 months ago

🚩🌺🌅🌺🚩
ಮುಂಜಾನೆಯ ಸೂಳ್ನುಡಿ
ಅನ್ನಾದ್ ಗೃಹಸ್ಥಾ ಲೋಕೇsಸ್ಮಿನ್ ಭಿಕ್ಷವಸ್ತಾಪಸಾಸ್ತಥಾ |
ಅನ್ನಾದ್ ಭವಂತಿ ವೈ ಪ್ರಾಣಾಃ ಪ್ರತ್ಯಕ್ಷಂ ನಾತ್ರ ಸಂಶಯಃ ||

"ಈ ಲೋಕದಲ್ಲಿ ಗೃಹಸ್ಥರು, ತಪಸ್ವಿಗಳು ಹಾಗೂ ಸಂನ್ಯಾಸಿಗಳು ಅನ್ನದಿಂದಲೇ ಜೀವನ ನಿರ್ವಹಣೆಯನ್ನು ಮಾಡುತ್ತಾರೆ. ಅನ್ನದಿಂದಲೇ ಪ್ರಾಣಗಳ ಪೋಷಣೆಯಾಗುತ್ತದೆ. ಇದು ಪ್ರತ್ಯಕ್ಷ, ಇದರಲ್ಲಿ ಯಾವ ಸಂಶಯವಿಲ್ಲ.
(ಅನ್ನದ ಮಹತ್ವ)
*🙏🌺ಶುಭದಿನವಾಗಲಿ🌺🙏*

We recommend to visit

ಸಮುದ್ರದ ಅಲೆ ನನಗೆ ಆದರ್ಶ.
ಎದ್ದು ಎದ್ದು ಬೀಳುತ್ತಿರುವುದಕ್ಕಲ್ಲ.
ಬಿದ್ದರೂ ಏಳುತ್ತಿರುವುದಕ್ಕೆ.
ಬೀಳುವುದನ್ನು ಕಂಡ ನೀವು
ಸ್ವಲ್ವ ಇದ್ದು ಏಳುವುದನ್ನು ಕೂಡ ನೋಡಿ ಹೋಗಿ,
ಚೆನ್ನಾಗಿರುತ್ತದೆ💥💪💥

ಹಿಂದೂಸ್ಥಾನವು ಎಂದೂ ಮರೆಯದ
ಭಾರತ ರತ್ನವು ನೀನಾಗು...💪

ನಿಮ್ಮ ಮನದನಿಯ ಸಾರಥಿ!🤗
@LovingCHALLENGES

Last updated 1 week ago

🔥 ಸತ್ಯಮೇವ ಜಯತೆ 🔥

Channel Created : 𝟏𝟓th August 𝟐𝟎𝟐𝟑
"ᏢᏟ ಯಿಂದ ᎠᏟ" ವರೆಗಿನ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಪೂರ್ಣ ಉಚಿತ ಮಾರ್ಗದರ್ಶನ ಒಂದೇ ವೇದಿಕೆಯಲ್ಲಿ!!
👉🏻 ಪ್ರತಿನಿತ್ಯ ಕ್ವಿಜ್ ᴜᴘʟᴏᴀᴅ ಮಾಡಲಾಗುತ್ತದೆ.

Buy Ads Here: https://telega.io/c/kannadaquiz0

Last updated 1 day, 10 hours ago

ೀ 𝐒𝐓𝐀𝐑𝐓𝐄𝐂𝐇 𝐎𝐅𝐅𝐈𝐂𝐈𝐀𝐋 𝐁𝐎𝐓
@OfficialSTA_bot

ೀ 𝐋𝐔𝐌𝐈𝐍𝐎𝐕𝐀 𝐎𝐒𝐈𝐒
@LuminovaOsis
@LuminovaOsisbot

ೀ 𝐏𝐀𝐑𝐓𝐍𝐄𝐑𝐒𝐇𝐈𝐏 𝐒𝐓𝐀𝐑𝐓𝐄𝐂𝐇 𝐀𝐂𝐀𝐃𝐄𝐌𝐘
@STApartner
@STApartner_bot

"𝘤𝘳𝘦𝘢𝘵𝘪𝘷𝘪𝘵𝘺 𝘵𝘩𝘢𝘵 𝘪𝘴 𝘤𝘳𝘦𝘢𝘵𝘦

Last updated 4 days, 22 hours ago