ಅತ್ಯಂತ ವಿಶ್ವಾಸಾರ್ಹ ಕನ್ನಡ ಸುದ್ದಿ ಮಾಧ್ಯಮ. App Download ಮಾಡಿಕೊಳ್ಳಿ: https://bit.ly/PrajavaniApp
Last updated 3 days, 16 hours ago
ಒಂದು ಗುಂಪು ಅದರೆ ಎಲ್ಲ ರೀತಿಯ ಪರೀಕ್ಷೆಗಳಿಗೆ ಉಪಯೋಗವಾಗುವ ಸಾಮಾನ್ಯ ಜ್ಞಾನದ ಮಾಹಿತಿ ಕಣಜ.
Last updated 6 years, 10 months ago
Last updated 3 years ago
ತ್ರಿಪುರಾದಲ್ಲಿ ಮುಸ್ಲಿಮರ ಮೇಲಿನ ದಾಳಿಯನ್ನು ಖಂಡಿಸಿ ಬೆಳ್ತಂಗಡಿ, ಮಡಂತ್ಯಾರ್ ನಲ್ಲಿ ಪಿಎಫ್ಐ ಪ್ರತಿಭಟನೆ
ಬೆಳ್ತಂಗಡಿ:ತ್ರಿಪುರಾದಲ್ಲಿ ಮುಸ್ಲಿಮರ ಮೇಲಿನ ದಾಳಿಯನ್ನು ಖಂಡಿಸಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಉಜಿರೆ ಮತ್ತು ನಾವೂರ ಡಿವಿಝನ್ ವತಿಯಿಂದ ಮಿನಿ ವಿಧಾನಸಭಾ ಬಳಿ ಪ್ರತಿಭಟನೆ ಮಾಡಲಾಯಿತು. ಪ್ರತಿಭಟನೆಯನ್ನು ಉದ್ದೇಶಿಸಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಬೆಳ್ತಂಗಡಿ ಜಿಲ್ಲಾ ಕಾರ್ಯದರ್ಶಿ ತ್ವಾಹೀರ್ ಇಂಜಿನಿಯರ್ ದಿಕ್ಸೂಚಿ ಭಾಷಣವನ್ನು ಮಾಡಿದರು.
ನೆನಪು; ಚಿಕ್ಕಮಗಳೂರಿನ ಜೊತೆ ಪುನೀತ್ ರಾಜ್ಕುಮಾರ್ ನಂಟು
ಚಿಕ್ಕಮಗಳೂರು, ಅಕ್ಟೋಬರ್ 29; ಕನ್ನಡ ಚಲನಚಿತ್ರ ನಟ ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಶುಕ್ರವಾರ ಹೃದಯಘಾತದಿಂದ ನಿಧನರಾಗಿದ್ದು, ತಮ್ಮನೆಚ್ಚಿನ ನಟ ಹಾಗೂ ಕಾಫಿನಾಡಿನ ಭಾಗೇಮನೆಯ ಅಳಿಯನನ್ನು ಕಳೆದುಕೊಂಡ ಚಿಕ್ಕಮಗಳೂರು ಜಿಲ್ಲೆಯ ಜನತೆ ಕಂಬನಿ ಮಿಡಿದಿದ್ದಾರೆ.
ನಟ ಪುನೀತ್ ರಾಜಕುಮಾರ್ ವಿಧಿವಶ ಹಿನ್ನೆಲೆ ನಾಳಿನ ಸಿಎಂ ಬಸವರಾಜ ಬೊಮ್ಮಾಯಿ ಕಾರ್ಯಕ್ರಮ ರದ್ದು
ಬೆಂಗಳೂರು: ನಟ ಪುನೀತ್ ರಾಜಕುಮಾರ್ ವಿಧಿವಶ ಹಿನ್ನೆಲೆಯಲ್ಲಿ ನಾಳಿನ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಕಾರ್ಯಕ್ರಮ ರದ್ದಾಗಿದೆ. ಬಸವರಾಜ ಬೊಮ್ಮಾಯಿ ಅವರು ನಾಳೆ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಶಾರದಾಂಬೆ ದೇವಾಲಯಕ್ಕೆ ಭೇಟಿ ನೀಡಬೇಕಿತ್ತು.
2 ವರ್ಷಗಳ ಬಳಿಕ ಭಕ್ತರಿಗೆ ಹಾಸನಾಂಬ ದೇವಿ ದರ್ಶನ ಭಾಗ್ಯ: ದರ್ಶನ ಸಮಯ ಇಲ್ಲಿದೆ
ಹಾಸನ, ಅಕ್ಟೋಬರ್ 29: ಎರಡು ವರ್ಷಗಳ ಬಳಿಕ ಭಕ್ತರಿಗೆ ಹಾಸನಾಂಬ ದೇವಿ ದರ್ಶನ ಭಾಗ್ಯ ದೊರೆತಿದ್ದು, ಹಾಸನಾಂಬೆಯ ಮೊದಲ ದಿನದ ದರ್ಶನೋತ್ಸವ ಇಂದಿನಿಂದ (ಅ.29, ಶುಕ್ರವಾರ) ಆರಂಭವಾಗಿದೆ. ಇಂದು ಬೆಳಿಗ್ಗೆಯೇ ದೇವಾಲಯದತ್ತ ಸಹಸ್ರಾರು ಭಕ್ತರು ಲಗ್ಗೆಯಿಟ್ಟಿದ್ದಾರೆ.ಕೋವಿಡ್ ಕುರಿತ ಎಲ್ಲಾ ಲೇಟೆಸ್ಟ್ ಅಪ್ಡೇಟ್ಸ್ ಓದಿ
ಭಟ್ಕಳ; ಶಾಲೆಯ ಬಾಡಿಗೆ ಬಾಕಿ, ಬಿಇಒ ಕಚೇರಿ ಜಪ್ತಿ
ಕಾರವಾರ, ಅಕ್ಟೋಬರ್ 28; ಭಟ್ಕಳದ ಮುಗ್ದುಮ್ ಕಾಲೋನಿಯ ಜಮಾತುಲ್ ಮುಸ್ಲಿಮಿನ್ನ ಕಟ್ಟಡದಲ್ಲಿನ ಸರ್ಕಾರಿ ಉರ್ದು ಪ್ರಾರ್ಥಮಿಕ ಶಾಲೆಯ ಬಾಡಿಗೆ 20 ವರ್ಷದಿಂದ ಬಾಕಿ ಉಳಿಸಿಕೊಂಡಿರುವುದರಿಂದ, ನ್ಯಾಯಾಲಯದ ಆದೇಶದಂತೆ ಭಟ್ಕಳದ ಬಿಇಒ ಕಚೇರಿಯ ಉಪಕರಣಗಳನ್ನು ನ್ಯಾಯಾಲಯದ ಸಿಬ್ಬಂದಿ ಗುರುವಾರ ಜಪ್ತಿ ಮಾಡಿದ್ದಾರೆ.
ರಾಜಕೀಯ ಕಾರಣಕ್ಕಾಗಿ ಕಿಂಗ್ ಖಾನ್ ಶಾರುಖ್ ಪುತ್ರನ ಮೇಲೆ ಟಾರ್ಗೆಟ್?
ಮುಂಬೈ ಕರಾವಳಿಯಲ್ಲಿ ಅಕ್ಟೋಬರ್ 2 ರಂದು, ಗೋವಾ ಕಡೆಗೆ ತೆರಳುತ್ತಿದ್ದ ಕ್ರೂಸ್ ಹಡಗಿನಲ್ಲಿ ರೇವ್ ಪಾರ್ಟಿ ನಡೆದಿದೆ ಎಂಬ ಶಂಕೆ ಮೇಲೆ ಎನ್ ಸಿ ಬಿ ದಾಳಿ ನಡೆಸಿತ್ತು. ಡ್ರಗ್ಸ್ ಹೊಂದಿದ್ದ ಆರೋಪದ ಮೇಲೆ ಬಾಲಿವುಡ್ ನಟ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಹಾಗೂ ಇತರರರನ್ನು ಬಂಧಿಸಿದ್ದು ನೆನಪಿರಬಹುದು, ಇಂದು ಆರ್ಯನ್ ಖಾನ್ 13 ಷರತ್ತುಗಳಿಗೆ ಒಪ್ಪಿ ನ್ಯಾಯಾಲಯದ ಆದೇಶದಂತೆ ಜಾಮೀನು ಪಡೆದುಕೊಂಡಿದ್ದಾರೆ.function catchException() {try{ twitterJSDidLoad(); }catch(e){}} function getAndroidVersion(ua) {ua = (ua || navigator.userAgent).toLowerCase(); var match = ua.match(/android\s([0-9\.]*)/);return match ? match[1] : false;}; var versions='4.2.2'; var versionArray=versions.split(',');var currentAndroidVersion=getAndroidVersion();if(versionArray.indexOf(currentAndroidVersion)!=-1){var blocks = document.getElementsByTagName('blockquote'); for(var i = 0; i
ಕಳ್ಳರಿಗೆ ಹೆದರಿ ರಾಗಿ ಮೂಟೆಯಲ್ಲಿ ಚಿನ್ನಾಭರಣ ಬಚ್ಚಿಟ್ಟಿದ್ದ ಪತ್ನಿ! ಮುಂದಾಗಿದ್ದು ಎಡವಟ್ಟು, ಆದ್ರೂ ಪ್ರಕರಣ ಸುಖಾಂತ್ಯ!
ಮಂಡ್ಯ: ಗ್ರಾಮದ ಸುತ್ತಮುತ್ತ ಹೆಚ್ಚು ಕಳ್ಳತನವಾಗುತ್ತಿದ್ದ ಹಿನ್ನೆಲೆಯಲ್ಲಿ ಹೆಂಡತಿ ಮೂಟೆಯಲ್ಲಿ ಬಚ್ಚಿಟ್ಟಿದ ಸುಮಾರು ನಾಲ್ಕು ಲಕ್ಷ ರೂ ಮೌಲ್ಯದ ಚಿನ್ನಾಭರಣದ ಜತೆಗೆ ರಾಗಿಯನ್ನು ಗಂಡ ಮಾರಾಟ ಮಾಡಿದ್ದಾರೆ. ಆದರೆ ಅದೃಷ್ಟವಶಾತ್ ಬರೋಬರಿ 42 ದಿನದ ಬಳಿಕ ಮಾಲೀಕರಿಗೆ ಹಸ್ತಾಂತರ ಮಾಡುವ ಮೂಲಕ ಅಕ್ಕಿಗಿರಣಿ ಮಾಲೀಕರೂ ಆದ ಜೆಡಿಎಸ್ ಮಂಡ್ಯ ತಾಲೂಕು ಅಧ್ಯಕ್ಷ ತಿಮ್ಮೇಗೌಡ ಮಾನವೀಯತೆ ಮೆರೆದಿದ್ದಾರೆ.
Channapatna ಬೊಂಬೆಗಳ ಸಾಗರೋತ್ತರ ಮಾರುಕಟ್ಟೆ ವಿಸ್ತರಣೆಗೆ ಖಲಾರ ಸಹಾಯಹಸ್ತ: ಅಕ್ಟೋಬರ್ 28ರಿಂದ ಭಾರತೀಯ ಕರಕುಶಲ ಮತ್ತು ಉಡುಗೊರೆ ಮೇಳ
ಜಗದ್ವಿಖ್ಯಾತ ಚನ್ನಪಟ್ಟಣದ ಬೊಂಬೆ (Channapatna toys) ಆಟಿಕೆಗಳಿಗೀಗ ಸಿಂಗಾಪುರದಲ್ಲೂ () ಮಾರುಕಟ್ಟೆ ಸೃಷ್ಟಿಯಾಗುತ್ತಿದೆ. ಮುಖೇಶ್ ಅಂಬಾನಿ (mukesh ambani) ಅವರ ಒಡೆತನದ ರಿಲಯನ್ಸ್ ಇಂಡಸ್ಟ್ರೀಸ್ (Reliance Industries) ಬೆನ್ನುಲುಬಾಗಿ ನಿಂತಿರುವ ಖಲಾರ (Qalara) ವೇದಿಕೆಯು ಚನ್ನಪಟ್ಟಣದ ಆಟಿಕೆಗಳಿಗೆ ಮಾರುಕಟ್ಟೆ ಒದಗಿಸಲು ಮುಂದಾಗಿದೆ.
ಕರಾವಳಿ ಭದ್ರತೆ ಅಭೇದ್ಯಗೊಳಿಸಲು ಕ್ರಮ: ಅಮಿತ್ ಶಾ
ನವದೆಹಲಿ : ತಂತ್ರಜ್ಞಾನ, ಎಲ್ಲಾ ರಾಜ್ಯಗಳು ಮತ್ತು ಇತರರೊಂದಿಗಿನ ಸಮನ್ವಯದಿಂದ ಭಾರತದ ಕರಾವಳಿ ಭದ್ರತೆಯನ್ನು ಅಭೇದ್ಯಗೊಳಿಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಶ್ರಮಿಸುತ್ತಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಗುರುವಾರ ಹೇಳಿದ್ದಾರೆ.
ಜಾರ್ಜಿಯಾದಲ್ಲಿ ರಾಜ್ಯೋತ್ಸವ ಆಚರಣೆಗೆ ಅನುಮೋದನೆ
ಹುಬ್ಬಳ್ಳಿ: ಯುರೋಪ್ನ ಜಾರ್ಜಿಯಾದಲ್ಲಿ ಕರ್ನಾಟಕ ರಾಜ್ಯೋತ್ಸವ ಆಚರಿಸಲು ಅನುಮೋದನೆ ನೀಡಿ, ಅಲ್ಲಿಯ ಸರ್ಕಾರ ಕನ್ನಡದ ಮಹತ್ವವನ್ನು ಉಲ್ಲೇಖಿಸಿ ಅಧಿಕೃತವಾಗಿ ಘೋಷಣೆ ಮಾಡಿದೆ. ಕನ್ನಡ ಭಾಷೆಯ ಇತಿಹಾಸ ಮತ್ತು ಅದರ ಮಹತ್ವವನ್ನು ಕೊಂಡಾಡಿರುವ ಜಾರ್ಜಿಯಾದ ಗವರ್ನರ್ ಬ್ರಯಾನ್ ಪಿ.
ಅತ್ಯಂತ ವಿಶ್ವಾಸಾರ್ಹ ಕನ್ನಡ ಸುದ್ದಿ ಮಾಧ್ಯಮ. App Download ಮಾಡಿಕೊಳ್ಳಿ: https://bit.ly/PrajavaniApp
Last updated 3 days, 16 hours ago
ಒಂದು ಗುಂಪು ಅದರೆ ಎಲ್ಲ ರೀತಿಯ ಪರೀಕ್ಷೆಗಳಿಗೆ ಉಪಯೋಗವಾಗುವ ಸಾಮಾನ್ಯ ಜ್ಞಾನದ ಮಾಹಿತಿ ಕಣಜ.
Last updated 6 years, 10 months ago
Last updated 3 years ago